ಕ್ರಿಕೆಟ್​ ಪಂದ್ಯದ ವೇಳೆ ಮೊಬೈಲ್​ನಲ್ಲಿ ಗೆಳತಿಗೆ ಸಂದೇಶ ಕಳುಹಿಸಿದ ಕ್ರಿಕೆಟಿಗನಿಗೆ ಒಂದು ಲಕ್ಷ ರೂ. ದಂಡ!

ಕ್ರಿಕೆಟ್​ ಪಂದ್ಯದ ವೇಳೆ ಮೊಬೈಲ್​ನಲ್ಲಿ ಗೆಳತಿಗೆ ಸಂದೇಶ ಕಳುಹಿಸಿದ ಕ್ರಿಕೆಟಿಗನಿಗೆ ಒಂದು ಲಕ್ಷ ರೂ. ದಂಡ!
ಕ್ರಿಕೆಟ್​ ಪಂದ್ಯದ ವೇಳೆ ಮೊಬೈಲ್​ನಲ್ಲಿ ಗೆಳತಿಗೆ ಸಂದೇಶ ಕಳುಹಿಸಿದ ಕ್ರಿಕೆಟಿಗನಿಗೆ ಒಂದು ಲಕ್ಷ ರೂ. ದಂಡ!
Published on

ಚೆನ್ನೈ: ತಮಿಳುನಾಡು ಪ್ರೀಮಿಯರ್​ ಲೀಗ್​ (TNPL​) ಪಂದ್ಯದ ವೇಳೆ ಮೊಬೈಲ್​ ಬಳಸಿ ಗೆಳತಿಗೆ (

girlfriend

) ಪದ ಸಂದೇಶ ಕಳುಹಿಸುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಿರುವ ಕ್ರಿಕೆಟಿಗನೊಬ್ಬನಿಗೆ ಬಿಸಿಸಿಐ ಒಂದು ಲಕ್ಷ ರೂ. ದಂಡ ಶಿಕ್ಷೆ ವಿಧಿಸಿದೆ. ತಮಿಳುನಾಡು ಪರ ರಣಜಿ ಪಂದ್ಯವನ್ನೂ ಆಡಿರುವ ಆ ಆಟಗಾರನನ್ನು ಸಂಪೂರ್ಣ ಟೂರ್ನಿಯಿಂದಲೂ ನಿಷೇಧಿಸಲಾಗಿದೆ.


ಪಂದ್ಯದ ವೇಳೆ ಮೊಬೈಲ್​ ಬಳಕೆ ರ್ನಿಬಂಧಿತ ಪ್ರದೇಶದಲ್ಲಿ ಕುಳಿತು ಆತ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದುದನ್ನು ಬಿಸಿಸಿಐನ ಭ್ರಷ್ಟಚಾರ ನಿಗ್ರಹ ಘಟಕ (ಎಸಿಎಸ್​ಯು) ಪತ್ತೆ ಹಚ್ಚಿತ್ತು. ಆಲ್ರೌಂಡರ್​ ಆಗಿರುವ ಈ ಆಟಗಾರನ ಹೆಸರು ಬಹಿರಂಗಪಡಿಸಲಾಗಿಲ್ಲ. ಗೆಳತಿಗೆ ಸಂದೇಶ ಕಳುಹಿಸುತ್ತಿದ್ದುದನ್ನು ಬಿಟ್ಟು ಆತ, ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಶಂಕೆ ಇಲ್ಲ. ಇದೊಂದು ಶಿಷ್ಟಾಚಾರ ಉಲ್ಲಂಘನೆಯ ಪ್ರಕರಣವಷ್ಟೇ ಆಗಿದೆ ಎಂದು ತಮಿಳುನಾಡು ಕ್ರಿಕೆಟ್​ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಲಿ ವರ್ಷ ಐಪಿಎಲ್​ನಲ್ಲೂ ರಾಜಸ್ಥಾನ ರಾಯಲ್ಸ್​ ತಂಡದ ಮ್ಯಾನೇಜರ್​ ರವಿಂದರ್​ ಸಿಂಗ್​ ರೋಮಿ ಬಿಂದರ್​ ಪಂದ್ಯದ ವೇಳೆ ಆಟಗಾರರ ಡಗೌಟ್​ನಲ್ಲಿ ಕುಳಿತು ಮೊಬೈಲ್​ ಬಳಸಿದ್ದು ವಿವಾದ ಸೃಷ್ಟಿಸಿತ್ತು. ಇದಕ್ಕಾಗಿ ಬಿಸಿಸಿಐ ಅವರಿಗೆ 1 ಲಕ್ಷ ರೂ. ದಂಡ ವಿಧಿಸಿತ್ತು. ಪಕ್ಕದಲ್ಲೇ ಕುಳಿತು ಮೊಬೈಲ್​ ಬಳಕೆ ವೀಕ್ಷಿಸಿದ್ದ ಆಟಗಾರ ವೈಭವ್​ ಸೂರ್ಯವಂಶಿ ಶಿಕ್ಷೆಯಿಂದ ಪಾರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net