IPL-2026: ಇಂದು ಅಜೇಯ ಪಂಜಾಬ್​ ಕಿಂಗ್ಸ್​​ಗೆ ಲಖನೌ ಸೂಪರ್​ಜೈಂಟ್ಸ್​ ಸವಾಲು

IPL-2026: ಇಂದು ಅಜೇಯ ಪಂಜಾಬ್​ ಕಿಂಗ್ಸ್​​ಗೆ ಲಖನೌ ಸೂಪರ್​ಜೈಂಟ್ಸ್​ ಸವಾಲು
IPL-2026: ಇಂದು ಅಜೇಯ ಪಂಜಾಬ್​ ಕಿಂಗ್ಸ್​​ಗೆ ಲಖನೌ ಸೂಪರ್​ಜೈಂಟ್ಸ್​ ಸವಾಲು
Published on
ಮುಲ್ಲನ್​ಪುರ: ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡವೆನಿಸಿರುವ ಪಂಜಾಬ್​ ಕಿಂಗ್ಸ್​ ಮತ್ತು ಅಸ್ಥಿರ ನಿರ್ವಹಣೆ ತೋರುತ್ತಿರುವ ಲಖನೌ ಸೂಪರ್​ಜೈಂಟ್ಸ್​ ತಂಡಗಳು ಐಪಿಎಲ್ (IPL)​ 19ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ಮುಖಾಮುಖಿ ಆಗಲಿವೆ. ಶ್ರೇಯಸ್​ ಅಯ್ಯರ್​ ಪಡೆ ತನ್ನ 6ನೇ ಪಂದ್ಯದಲ್ಲೂ ಅಜೇಯ ಓಟ ಕಾಯ್ದುಕೊಳ್ಳಲು ಎಲ್​ಎಸ್​ಜಿ ಅವಕಾಶ ನೀಡುವುದೇ ಎಂಬ ಕುತೂಹಲ ಹರಡಿದೆ.

ಹಾಲಿ ರನ್ನರ್​ಅಪ್​ ಪಂಜಾಬ್​ ತಂಡ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಜತೆಗೆ ಬ್ಯಾಟಿಂಗ್​ನಲ್ಲಿ ಪ್ರಭ್​ಸಿಮ್ರನ್​ ಸಿಂಗ್​ (211), ನಾಯಕ ಶ್ರೇಯಸ್​ ಅಯ್ಯರ್​ (203), ಕೂಪರ್​ ಕೊನೊಲಿ (136), ಪ್ರಿಯಾಂಶ್​ ಆರ್ಯ (118) ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ತಂಡದ ಮಧ್ಯಮ ಕ್ರಮಾಂಕಕ್ಕೆ ಇನ್ನೂ ಸತ್ವಪರೀೆ ಎದುರಾಗಿಲ್ಲ. ಬೌಲಿಂಗ್​ನಲ್ಲಿ ಕನ್ನಡಿಗ ವೈಶಾಖ್​ ವಿಜಯಕುಮಾರ್​, ಎಡಗೈ ವೇಗಿ ಅರ್ಷದೀಪ್​ ಸಿಂಗ್​ಗೆ ಉತ್ತಮ ಸಾಥ್​ ನೀಡುತ್ತಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಚಾಹಲ್​ ಅವರಿಂದ ಮಾತ್ರ ಈ ಬಾರಿಯೂ ನಿರೀತ ನಿರ್ವಹಣೆ ಬಂದಿಲ್ಲ. 

ಮತ್ತೊಂದೆಡೆ ಲಖನೌ ತಂಡ ಇದುವರೆಗೆ ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, 3ರಲ್ಲಿ ಸೋತಿದೆ. ಕೊನೇ 2 ಪಂದ್ಯಗಳಲ್ಲಿ ಗುಜರಾತ್​ ಮತ್ತು ಆರ್​ಸಿಬಿ ಎದುರು ನೀರಸ ಬ್ಯಾಟಿಂಗ್​ ನಿರ್ವಹಣೆ ತೋರಿ ಶರಣಾಗಿದೆ. ಲಖನೌ ಇದುವರೆಗೆ ಆಡಿದ 5 ಪಂದ್ಯಗಳಲ್ಲೂ 200ರ ಸನಿಹ ತಲುಪಿಲ್ಲ. ಏಡನ್​ ಮಾರ್ಕ್ರಮ್​ (120), ಮಿಚೆಲ್​ ಮಾರ್ಷ್​ (115) ಉತ್ತಮ ಬುನಾದಿ ಹಾಕಲು ವಿಲರಾಗುತ್ತಿದ್ದಾರೆ. ನಿಕೋಲಸ್​ ಪೂರನ್​ ಕೂಡ 5 ಪಂದ್ಯಗಳಲ್ಲಿ ಕೇವಲ 42 ರನ್​ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಬೌಲಿಂಗ್​ನಲ್ಲಿ ಪ್ರಿನ್ಸ್​ ಯಾದವ್​, ಆವೇಶ್​ ಖಾನ್​, ಮೊಹಮದ್​ ಶಮಿ ನಿರ್ವಹಣೆ ಸಮಾಧಾನಕರವೆನಿಸಿದೆ.
ಪಂದ್ಯಕ್ಕೆ ಪಂತ್​ ಫಿಟ್​?
ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಸಲ್​ವುಡ್​ ಎಸೆತದಲ್ಲಿ ಚೆಂಡೇಟಿನಿಂದ ಮೊಣಕೈ  ಗಾಯಕ್ಕೊಳಗಾಗಿದ್ದ ಎಲ್​ಎಸ್​ಜಿ ನಾಯಕ ಹಾಗೂ ವಿಕೆಟ್​ ಕೀಪರ್​ ರಿಷಭ್​ ಪಂತ್​ ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಫಿಟ್​ ಆಗುವರೇ ಎಂಬುದು ಸ್ಪಷ್ಟವಿಲ್ಲ. ಆಡಿರುವ 5 ಪಂದ್ಯಗಳಲ್ಲಿ 104 ರನ್​ ಮಾತ್ರ ಗಳಿಸಿರುವ ಪಂತ್​, ಬ್ಯಾಟಿಂಗ್​ನಲ್ಲಿ ಮಿಂಚಬೇಕಾದ ಒತ್ತಡದ ನಡುವೆ ಫಿಟ್ನೆಸ್​ ಸಮಸ್ಯೆಯನ್ನೂ ಎದುರಿಸಿದ್ದಾರೆ. ಅವರು ಫಿಟ್​ ಆಗದಿದ್ದರೆ ಉಪನಾಯಕ ನಿಕೋಲಸ್​ ಪೂರನ್​ ತಂಡವನ್ನು ಮುನ್ನಡೆಸಲಿದ್ದಾರೆ. ಆಗ ತಂಡದ ಗರಿಷ್ಠ ರನ್​ಸ್ಕೋರರ್​ ಮುಕುಲ್​ ಚೌಧರಿ (127) ವಿಕೆಟ್​ ಕೀಪಿಂಗ್​ ಕೂಡ ನಿರ್ವಹಿಸಬಹುದು.
ಮುಖಾಮುಖಿ: 6
ಪಂಜಾಬ್​: 3
ಲಖನೌ: 3
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net