ಕೋಲ್ಕತ: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಮೊದಲ ದಿನವೇ ಐದು ವಿಕೆಟ್ ಪಡೆದು ಮಿಂಚಿದ ನಡುವೆಯೂ ವಿವಾದದ ಸುಳಿಗೆ ಸಿಲುಕಿದ್ದಾರೆ. ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಬುಮ್ರಾ ಎಸೆದ ಕೊನೇ ಎಸೆತ ಬವುಮಾ ಪ್ಯಾಡ್‌ಗೆ ಬಡಿಯಿತು. ಆಗ ಬುಮ್ರಾ ಅವರ ಎಲ್‌ಬಿಡಬ್ಲುೃ ಮನವಿಯನ್ನ ಆನ್‌ಫೀಲ್ಡ್ ಅಂಪೈರ್ ತಿರಸ್ಕರಿಸಿದರು. ನಂತರ ಡಿಆರ್‌ಎಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡುವಾಗ ಕೀಪರ್ ಪಂತ್, ಚೆಂಡು ಲೆಗ್ ಸ್ಟಂಪ್‌ನಿಂದ ಮೇಲಿದೆ ಎಂದರು. ಆಗ ‘ಬೌನಾ ಬೀ ಹೈ’ (ಇವನು ಕುಳ್ಳ ಅಥವಾ ಕುಬ್ಜ) ಎಂದು ಬುಮ್ರಾ ಹೇಳಿರುವ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಸದ್ಯ ಇದರ ಆಡಿಯೋ/ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.