ಐಸಿಸಿ ಟೆಸ್ಟ್ ವಿಶ್ವಕಪ್​ನಲ್ಲಿ ಕುತೂಹಲ ಕೆರಳಿಸಿದ ಫೈನಲ್​ ರೇಸ್; ಭಾರತದೊಂದಿಗೆ ಆಸೀಸ್​, ಆಫ್ರಿಕಾ, ಕಿವೀಸ್​ ಪೈಪೋಟಿ!

ಐಸಿಸಿ ಟೆಸ್ಟ್ ವಿಶ್ವಕಪ್​ನಲ್ಲಿ ಕುತೂಹಲ ಕೆರಳಿಸಿದ ಫೈನಲ್​ ರೇಸ್; ಭಾರತದೊಂದಿಗೆ ಆಸೀಸ್​, ಆಫ್ರಿಕಾ, ಕಿವೀಸ್​ ಪೈಪೋಟಿ!
ಐಸಿಸಿ ಟೆಸ್ಟ್ ವಿಶ್ವಕಪ್​ನಲ್ಲಿ ಕುತೂಹಲ ಕೆರಳಿಸಿದ ಫೈನಲ್​ ರೇಸ್; ಭಾರತದೊಂದಿಗೆ ಆಸೀಸ್​, ಆಫ್ರಿಕಾ, ಕಿವೀಸ್​ ಪೈಪೋಟಿ!
Published on

ಬೆಂಗಳೂರು: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 2025-27ರ 27 ಸರಣಿಗಳ ಪೈಕಿ 12 ಈಗಾಗಲೆ ಪೂರ್ಣಗೊಂಡಿದ್ದು, ಇನ್ನೂ 15 ಸರಣಿಗಳು ಬಾಕಿ ಉಳಿದಿವೆ. 4ನೇ ಆವೃತ್ತಿಯ ಫೈನಲ್​ ಪ್ರವೇಶಿಸುವ ಪೈಪೋಟಿ ಮುಂದಿನ ಕೆಲ ತಿಂಗಳುಗಳಲ್ಲಿ ಅತ್ಯಂತ ರೋಚಕವಾಗಿ ಸಾಗಲಿವೆ. ಗುರುವಾರ ಆರಂಭಗೊಂಡಿರುವ ಆಸ್ಟ್ರೆಲಿಯಾ-ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯೊಂದಿಗೆ ಫೈನಲ್​ಗೇರುವ (

ICC World Test Championship

) ಅಂತಿಮ ಹಂತದ ರೇಸ್​ಗೆ ಚಾಲನೆ ಸಿಕ್ಕಿದೆ. ಭಾರತ ಶನಿವಾರ ಆರಂಭವಾಗಲಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಈ ರೇಸ್​ ಪ್ರವೇಶಿಸಲಿದೆ.

ಅಂಕಪಟ್ಟಿಯ ಅಗ್ರ 2 ತಂಡಗಳಷ್ಟೇ ಮುಂದಿನ ವರ್ಷ ಜೂನ್​ 9ರಿಂದ ಓವಲ್​ನಲ್ಲಿ ನಡೆಯಲಿರುವ ಫೈನಲ್​ನಲ್ಲಿ ಆಡಲಿವೆ. ಇದರ ಅರ್ಹತೆ ಇಂತಿಷ್ಟೇ ಅಂಕಗಳು ಅಥವಾ ಶೇಕಡವಾರು ಅಂಕಗಳು ಬೇಕೆಂದು ಹೇಳುವುದು ಕಠಿಣ. ಆದರೆ ಶೇ. 65ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಫೈನಲ್​ ಪ್ರವೇಶ ಬಹುತೇಕ ಖಚಿತ ಎನ್ನಬಹುದು. 2023ರಲ್ಲಿ ಭಾರತ (ಶೇ.58.8) ಮಾತ್ರ ಇದಕ್ಕಿಂತ ಕಡಿಮೆ ಅಂಕ ಗಳಿಸಿದರೂ ಫೈನಲ್​ಗೇರಿತ್ತು. 2025ರಲ್ಲಿ ಉಭಯ ಫೈನಲಿಸ್ಟ್​ಗಳೂ ಶೇ. 67ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು. ಹೀಗಾಗಿ ಹಾಲಿ ಆವೃತ್ತಿಯಲ್ಲಿ ತಂಡಗಳು ಉಳಿದ ಸರಣಿಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ಫೈನಲ್​ಗೇರುವ ಸಾಧ್ಯತೆಯ ವಿಶ್ಲೇಷಣೆ ಇಲ್ಲಿದೆ...
ಆಸ್ಟ್ರೆಲಿಯಾ
ಬಾಕಿ ಪಂದ್ಯ: 14 (4 ಸರಣಿ)

ಫೈ

ನಲ್​ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳುವ ಅವಕಾಶವೂ ಕಾಂಗರೂ ಮುಂದಿದೆ. ಯಾಕೆಂದರೆ 6 ಟೆಸ್ಟ್​ಗಳನ್ನು ಬಾಂಗ್ಲಾ (2), ನ್ಯೂಜಿಲೆಂಡ್​ (4) ವಿರುದ್ಧ ತವರಿನಲ್ಲೇ ಆಡಲಿದೆ. ದಣ ಆಫ್ರಿಕಾದಲ್ಲಿ ಆಡುವ 3 ಟೆಸ್ಟ್​ಗಳೂ ಆಸೀಸ್​ ಪಾಲಿಗೆ ನಿರ್ಣಾಯಕ ಎನಿಸಿದೆ. ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಇನ್ನು 6 ಜಯ, 1 ಡ್ರಾ ಅಗತ್ಯವಿದೆ.

ದಕ್ಷಿಣ ಆಫ್ರಿಕಾ:
ಬಾಕಿ ಪಂದ್ಯ: 10 (4 ಸರಣಿ)

ಫೈ

ನಲ್​ ಎದುರಾಳಿ ಆಸೀಸ್​ ವಿರುದ್ಧ ನಡೆಯಲಿದೆ. ಬಾಂಗ್ಲಾ (2), ಇಂಗ್ಲೆಂಡ್​ (3) ವಿರುದ್ಧವೂ ತವರಿನಲ್ಲೇ ಆಡಲಿದ್ದು, ಶ್ರೀಲಂಕಾದಲ್ಲಿ ಕೊನೇ 2 ಟೆಸ್ಟ್​ ಆಡಲಿದೆ. ದಣ ಆಫ್ರಿಕಾ ಶೇ. 60ಕ್ಕಿಂತ ಹೆಚ್ಚಿನ ಅಂಕ ಕಾಯ್ದುಕೊಳ್ಳಲು ಇನ್ನು 5 ಜಯ ಅಗತ್ಯವಿದೆ. 6-7ರಲ್ಲಿ ಗೆದ್ದರೆ ದ. ಆಫ್ರಿಕಾಕ್ಕೆ ಸತತ 2ನೇ ಬಾರಿ

ಫೈ

ನಲ್​ ಪ್ರವೇಶಿಸುವುದು ಬಹುತೇಕ ಖಾತ್ರಿಯಾಗಲಿದೆ.

ನ್ಯೂಜಿಲೆಂಡ್​
ಬಾಕಿ ಪಂದ್ಯ: 10 (4 ಸರಣಿ)
ಚೊಚ್ಚಲ ಆವೃತ್ತಿಯ ಚಾಂಪಿಯನ್​ ನ್ಯೂಜಿಲೆಂಡ್​, ಉಳಿದ 10 ಟೆಸ್ಟ್​ಗಳಲ್ಲಿ 4 ಮಾತ್ರ ತವರಿನಲ್ಲಿ ಆಡಲಿದೆ. 4 ಟೆಸ್ಟ್​ಗಳನ್ನು ಆಸೀಸ್​ ನೆಲದಲ್ಲಿ ಆಡಲಿರುವುದು ಕಠಿಣ ಸವಾಲೆನಿಸಿದೆ. ಪಾಕಿಸ್ತಾನದಲ್ಲಿ 2 ಟೆಸ್ಟ್​ ಆಡಬೇಕಿದೆ. ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಲು ಕಿವೀಸ್​ ಇನ್ನು 5 ಜಯ, 1 ಡ್ರಾ ಕಾಣುವುದು ಅಗತ್ಯವಾಗಿದೆ. ಹೀಗಾಗಿ ತವರಿನಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಆಡುವ ತಲಾ 2 ಟೆಸ್ಟ್​ಗಳಲ್ಲಿ ಗೆದ್ದರಷ್ಟೇ ಸಾಕಾಗದು. ಇನ್ನು 6ರಲ್ಲಿ ಗೆದ್ದರೆ ಶೇ.64.58 ಅಂಕ ಗಳಿಸುವ ಅವಕಾಶ ಕಿವೀಸ್​ ಮುಂದಿದೆ.
ಭಾರತ
ಬಾಕಿ ಪಂದ್ಯ: 9 (3 ಸರಣಿ)

ಫೈ

ನಲ್​ಗೇರುವ ಅವಕಾಶ ಹೆಚ್ಚಿಸಿಕೊಳ್ಳಲು ಉಳಿದೆಲ್ಲ ಪಂದ್ಯಗಳಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕಾದ ಸವಾಲು ಇದೆ. ಶ್ರೀಲಂಕಾ, ನ್ಯೂಜಿಲೆಂಡ್​ನಲ್ಲಿ ತಲಾ 2 ಪಂದ್ಯ ಆಡಲಿರುವ ಭಾರತ ಬಳಿಕ ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ಎದುರು ತವರಿನಲ್ಲಿ 5 ಟೆಸ್ಟ್​ ಆಡಲಿದೆ. ಆಸೀಸ್​ ವಿರುದ್ಧದ ಸರಣಿಯವರೆಗೆ

ಫೈ

ನಲ್​ ಆಸೆ ಜೀವಂತ ಉಳಿಸಿಕೊಳ್ಳಬೇಕಾದರೆ, ಭಾರತ ಮೊದಲ 2 ವಿದೇಶಿ ಸರಣಿಯಲ್ಲೂ ಉತ್ತಮ ನಿರ್ವಹಣೆ ತೋರುವುದು ಅನಿವಾರ್ಯವೆನಿಸಿದೆ. ಭಾರತ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಲು ಬಾಕಿ 9 ಟೆಸ್ಟ್​ಗಳಲ್ಲಿ 7 ಜಯ ಕಾಣಬೇಕಿದೆ. 8ರಲ್ಲಿ ಗೆದ್ದರೆ ಭಾರತ ಶೇ.68.52 ಅಂಕದೊಂದಿಗೆ

ಫೈ

ನಲ್​ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಬಹುದಾಗಿದೆ.

ಇತರ ತಂಡಗಳ ಲೆಕ್ಕಾಚಾರ...

ಫೈ

ನಲ್​ ಹಾದಿ ದುರ್ಗಮವಾಗಿದೆ. ಶ್ರೀಲಂಕಾ ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಉಳಿದ 8ರಲ್ಲಿ 6 ಜಯ ಕಾಣಬೇಕಾಗಿರುವುದರಿಂದ

ಫೈ

ನಲ್​ ಕೈಗೆಟಕುವುದು ಕಠಿಣವೆನಿಸಿದೆ. ಇಂಗ್ಲೆಂಡ್​ ಇದುವರೆಗೆ ಆಡಿರುವ 13 ಟೆಸ್ಟ್​ಗಳಲ್ಲಿ 8ರಲ್ಲಿ ಸೋತಿದ್ದು, ನಿಧಾನಗತಿ ಓವರ್​ಗಾಗಿ 14 ಅಂಕ ಕಡಿತ ಶಿಕ್ಷೆಯನ್ನೂ ಎದುರಿಸಿರುವುದರಿಂದ

ಫೈ

ನಲ್​ ಬಾಗಿಲು ಬಂದ್​ ಆಗಿದೆ. ಉಳಿದ 8ರಲ್ಲಿ ಗೆದ್ದರೂ ಶೇ.55ಕ್ಕಿಂತ ಹೆಚ್ಚು ಅಂಕ ಗಳಿಸಲಾಗದು. ಪಾಕ್​ ಕೂಡ ಇದುವರೆಗೆ ಆಡಿರುವ 6 ಟೆಸ್ಟ್​ಗಳಲ್ಲಿ 4ರಲ್ಲಿ ಸೋತಿದ್ದು, ಉಳಿದ 7ರಲ್ಲೂ ಗೆದ್ದರಷ್ಟೇ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಬಹುದಾಗಿದೆ. ವಿಂಡೀಸ್​ ಇದುವರೆಗೆ 12ರಲ್ಲಿ 8 ಸೋತಿದ್ದು, ಉಳಿದ 2 ಟೆಸ್ಟ್​ಗಳು ಕೇವಲ ಔಪಚಾರಿಕವೆನಿಸಿವೆ.

*ಶ್ರೀಲಂಕಾ: ಬಾಕಿ ಪಂದ್ಯ: 8 (4 ಸರಣಿ) *ಬಾಂಗ್ಲಾದೇಶ: ಬಾಕಿ ಪಂದ್ಯ: 8 (4 ಸರಣಿ)
*ಇಂಗ್ಲೆಂಡ್​: ಬಾಕಿ ಪಂದ್ಯ: 8 (3 ಸರಣಿ) *ಪಾಕಿಸ್ತಾನ: ಬಾಕಿ ಪಂದ್ಯ: 7 (3 ಸರಣಿ) *ವೆಸ್ಟ್​ ಇಂಡೀಸ್​: ಬಾಕಿ ಪಂದ್ಯ: 2 (1 ಸರಣಿ)
ಆಗಸ್ಟ್​ನಲ್ಲಿ ಇನ್ನು ಪ್ರತಿದಿನ ಟೆಸ್ಟ್​!
ಇನ್ನು ಗುರುವಾರದಿಂದ ಆಗಸ್ಟ್​ ತಿಂಗಳ ಕೊನೇ ದಿನದವರೆಗೂ ನಿರಂತರವಾಗಿ ಟೆಸ್ಟ್​ ಪಂದ್ಯಗಳು ನಡೆಯಲಿವೆ. ಇದರಿಂದ ಉಳಿದ 19 ದಿನಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಟೆಸ್ಟ್​ ಪಂದ್ಯ ನಡೆಯುತ್ತಿರುತ್ತದೆ! ಆಗಸ್ಟ್​ 13-17, 22-26ಕ್ಕೆ ಆಸೀಸ್​-ಬಾಂಗ್ಲಾ, ಆ.15-19, 23-27ಕ್ಕೆ ಭಾರತ-ಶ್ರೀಲಂಕಾ, ಆ.19-23, 27-31ಕ್ಕೆ ಇಂಗ್ಲೆಂಡ್​&ಪಾಕಿಸ್ತಾನ ನಡುವೆ ತಲಾ 2 ಟೆಸ್ಟ್​ ಪಂದ್ಯಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net