ಅಂತಿಮ ಹಂತ ತಲುಪಿದ ಆರ್​ಸಿಬಿ ಮಾರಾಟ ಪ್ರಕ್ರಿಯೆ; ಶೀಘ್ರದಲ್ಲೇ ಹೊಸ ಮಾಲೀಕರ ಹೆಸರು ಘೋಷಣೆ!

ಅಂತಿಮ ಹಂತ ತಲುಪಿದ ಆರ್​ಸಿಬಿ ಮಾರಾಟ ಪ್ರಕ್ರಿಯೆ; ಶೀಘ್ರದಲ್ಲೇ ಹೊಸ ಮಾಲೀಕರ ಹೆಸರು ಘೋಷಣೆ!
ಅಂತಿಮ ಹಂತ ತಲುಪಿದ ಆರ್​ಸಿಬಿ ಮಾರಾಟ ಪ್ರಕ್ರಿಯೆ; ಶೀಘ್ರದಲ್ಲೇ ಹೊಸ ಮಾಲೀಕರ ಹೆಸರು ಘೋಷಣೆ!
Published on
ಬೆಂಗಳೂರು: ಐಪಿಎಲ್ (IPL)​ 18ನೇ ಆವೃತ್ತಿಯ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಮಾರ್ಚ್​ ಮಧ್ಯಭಾಗದಲ್ಲಿ ಹೊಸ ಮಾಲೀಕರು ಯಾರೆಂದು ಖಚಿತವಾಗಲಿದೆ.

ಆರ್​ಸಿಬಿ ಒಡೆತನ ಹೊಂದಿರುವ ಡಿಯಾಜಿಯೋ ಕಂಪನಿ, ಕೊನೇ ಹಂತದ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಈಗಾಗಲೆ ಅಂತಿಮಗೊಳಿಸಿದೆ. ಮಾರ್ಚ್​ 10ರಂದು ಅಂತಿಮ ಹಂತದ ಬಿಡ್ಡಿಂಗ್​ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. 2026ರ ಮಾರ್ಚ್​ 31ರೊಳಗೆ ಆರ್​ಸಿಬಿ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಡಿಯಾಜಿಯೋ ಕಳೆದ ವರ್ಷ ನವೆಂಬರ್​ನಲ್ಲೇ ತಿಳಿಸಿತ್ತು.

ಆರ್​ಸಿಬಿಯ ಹಾಲಿ ಮಾಲೀಕರು 18,186 ಕೋಟಿ ರೂ. (2 ಶತಕೋಟಿ ಡಾಲರ್​) ಮೌಲ್ಯ ನಿಗದಿಪಡಿಸಿದ್ದಾರೆ. ಆದರೆ ಇತ್ತೀಚೆಗೆ ನಡೆದ ಪ್ರಾಥಮಿಕ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ 13,640 ಕೋಟಿ ರೂ.ನಿಂದ 16.368 ಕೋಟಿ ರೂ.ವರೆಗೆ (1.5ರಿಂದ 1.8 ಶತಕೋಟಿ ಡಾಲರ್​) ಬಿಡ್​ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಬಿಡ್ಡರ್​ಗಳು ಕೊನೇ ಹಂತದಲ್ಲಿ ತಮ್ಮ ಬಿಡ್​ ಮೊತ್ತವನ್ನು ಪರಿಷ್ಕರಿಸುವ ನಿರೀಕ್ಷೆ ಇದೆ.

ಮ್ಯಾಂಚೆಸ್ಟರ್​ ಯುನೈಟೆಡ್​ ಸಹ-ಮಾಲೀಕರಾದ ಅವ್ರಾಮ್​ ಗ್ಲೇಜರ್​, ಸೆರಮ್​ ಇಂಡಿಯಾದ ಸಿಇಒ ಅದರ್​ ಪೂನಾವಾಲ, ಮಣಿಪಾಲ್​ ಗ್ರೂಪ್​ ಚೇರ್ಮನ್​ ಡಾ. ರಂಜನ್​ ಪೈ, ಅಮೆರಿಕದ ಶತಕೋಟಿ ಉದ್ಯಮಿ ಡೇವಿಡ್​ ಬ್ಲಿಟ್ಜರ್​, ಭಾರತದ ಉದ್ಯಮಿಗಳಾದ ಗೌತಮ್​ ಅದಾನಿ, ಪಾರ್ಥ ಜಿಂದಾಲ್​ (ಜೆಎಸ್​ಡಬ್ಲ್ಯು) ಆರ್​ಸಿಬಿ ಖರೀದಿ ರೇಸ್​ನಲ್ಲಿರುವ ಪ್ರಮುಖರು ಎಂದು ಈ ಹಿಂದೆಯೇ ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net