ಇದೇ ಕಾರಣಕ್ಕೆ ನನಗೆ ಸಿಟ್ಟು! ಯುವ ವೇಗಿ ಬೆನ್ನಿಗೆ ನಿಂತ ಅಶ್ವಿನ್​; ಗೌತಿ ವಿರುದ್ಧ ಕೆಂಡಾಮಂಡಲ | IND vs NZ ODI

ಆರ್​. ಅಶ್ವಿನ್​, ಗೌತಮ್ ಗಂಭೀರ್​
ಆರ್​. ಅಶ್ವಿನ್​, ಗೌತಮ್ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧದ 2 ಏಕದಿನ ಪಂದ್ಯದಲ್ಲಿ ಕೊಡಲಿಲ್ಲ ಸ್ಥಾನ
  • ಯುವ ವೇಗಿ ಅರ್ಷದೀಪ್ ಸಿಂಗ್ ಪರ ಬ್ಯಾಟ್​ ಬೀಸಿದ ಆರ್​. ಅಶ್ವಿನ್
  • ಗೌತಮ್ ಗಂಭೀರ್ ವಿರುದ್ಧ ವಿಡಿಯೋದಲ್ಲಿ ಕಿಡಿಕಾರಿದ ಅಶ್ವಿನ್
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಒಂದು ಪಂದ್ಯ ಗೆದ್ದರೆ, ಕಿವೀಸ್ ಪಡೆ ಕೂಡ ಒಂದು ಪಂದ್ಯ ಗೆದ್ದಿದೆ. ಅಲ್ಲಿಗೆ, ಎರಡೂ ತಂಡಗಳು ಸರಣಿಯಲ್ಲಿ 1-1 ಅಂತರ ಕಾಯ್ದುಕೊಂಡಿದೆ.
ಮೊದಲೆರೆಡು ಪಂದ್ಯಗಳಿಂದ ಯುವ ವೇಗಿ ಅರ್ಷದೀಪ್​ ಸಿಂಗ್​ಗೆ ತಂಡದಲ್ಲಿ ಸ್ಥಾನ ಕೊಡದ ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್​ಮೆಂಟ್​ ವಿರುದ್ಧ ಇದೀಗ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಆರ್​.ಅಶ್ವಿನ್​ ತೀವ್ರ ಕಿಡಿಕಾರಿದ್ದಾರೆ. ಮೂರನೇ ಹಾಗೂ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಸಿಂಗ್ ಆಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಕೇಳಿಬಂದಿದೆ. ಇದರೊಟ್ಟಿಗೆ ಹಲವರು ಅವರನ್ನು ಆಡಿಸುವುದು ಉತ್ತಮ ಎಂಬ ಸಲಹೆಗಳನ್ನು ನೀಡಿದ್ದಾರೆ. ಈ ಮಧ್ಯೆ, ಅರ್ಷದೀಪ್​ ಪರ ಬ್ಯಾಟ್​ ಬೀಸಿರುವ ಅಶ್ವಿನ್​, ಟೀಮ್ ಮ್ಯಾನೇಜ್​ಮೆಂಟ್​ ನಡೆಗೆ ಭಾರೀ ಅಸಮಾಧಾನ ಹೊರಹಾಕಿದ್ದಾರೆ. ​
"ಅರ್ಷದೀಪ್​ ಸಿಂಗ್​ನ ಈ ರೀತಿ ಮೂಲೆಯಲ್ಲಿ ಕೂರಿಸುವುದು ಸರಿಯಲ್ಲ. ಇದರಿಂದ ಅವರು ಲಯ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಇಲ್ಲಿ ಬೌಲರ್​ಗಳ ನಡುವೆಯೇ ಪೈಪೋಟಿ ನಡೆಯುತ್ತಿದೆ. ಯಾಕಿಲ್ಲಿ, ಅರ್ಷದೀಪ್​ ಸಿಂಗ್​ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ? ಆತ ಎಷ್ಟು ಪಂದ್ಯಳನ್ನಾಡಿದ್ದಾನೆ ಅಥವಾ ಆಡಿಲ್ಲ ಎಂಬುದು ನಮ್ಮ ಪ್ರಶ್ನೆಯಲ್ಲ. ಈ ರೀತಿ ತಂಡದಲ್ಲಿ ಸ್ಥಾನ ಕೊಡದೆ ಬದಿಗಿಡುವುದು ಒಪ್ಪುವಂತದ್ದಲ್ಲ" ಎಂದಿದ್ದಾರೆ.
"ತನ್ನ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿ, ಸಾಬೀತುಪಡಿಸಿರುವ ವೇಗಿ ಈತ. ತಂಡಕ್ಕೆ ಹೆಚ್ಚೆಚ್ಚು ಕೊಡುಗೆ ನೀಡಿದ್ದಾನೆ. ಇಷ್ಟಾದರೂ ಸಹ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆತ ಇಂದಿಗೂ ಪರದಾಡುವಂತಿದೆ. ನೀವೇನಾದರೂ ಹೇಳಿ, ಕ್ರಿಕೆಟ್​ ಒಂದು ಆತ್ಮವಿಶ್ವಾಸದ ಆಟ. ಹೀಗೆ ಮಾಡುವುದರಿಂದ ಆತನ ಆತ್ಮವಿಶ್ವಾಸ ಕುಗ್ಗುತ್ತದೆ. ಪ್ರತಿ ಬಾರಿ ಬೌಲರ್​ಗಳಿಗೇ ಏಕೆ? ಬ್ಯಾಟರ್​ಗಳಿಗೆ ಏಕಿಂತ ಸಮಸ್ಯೆ ಕಾಡಲ್ಲ" ಎಂದು ಅಶ್ವಿನ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಟೀಮ್ ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net