ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್ ಪಡೆ, ಎಂ ತಂಡಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಿತು. ಕ್ವಿಂಟನ್ ಡಿಕಾಕ್ (ಅಜೇಯ 59 ಎಸೆತ, 112 ರನ್) ಮತ್ತು ನಮನ್ ಧಿರ್ (31 ಎಸೆತ, 50 ರನ್) ಅವರ ಭರ್ಜರಿ ಇನ್ನಿಂಗ್ಸ್ ಬಿಟ್ಟರೆ ಇನ್ಯಾರಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ.