ಕತಾರ್‌ಗೆ ಮೊದಲ ಅಂಕ: ಸ್ವಿಸ್‌ಗೆ ಕೊನೇ ಕ್ಷಣದಲ್ಲಿ ತಪ್ಪಿದ ಜಯ

ಕತಾರ್‌ಗೆ ಮೊದಲ ಅಂಕ: ಸ್ವಿಸ್‌ಗೆ ಕೊನೇ ಕ್ಷಣದಲ್ಲಿ ತಪ್ಪಿದ ಜಯ
ಕತಾರ್‌ಗೆ ಮೊದಲ ಅಂಕ: ಸ್ವಿಸ್‌ಗೆ ಕೊನೇ ಕ್ಷಣದಲ್ಲಿ ತಪ್ಪಿದ ಜಯ
Published on
ಸಾಂಟಾಕ್ಲಾರ (ಅಮೆರಿಕ): ಸ್ವಿಜರ್ಲೆಂಡ್ ಡಿಫೆಂಡರ್ ಮಿರೋ ಮುಹೈಮ್ (90+4ನೇ ನಿಮಿಷ) ಹೆಚ್ಚುವರಿ ಸಮಯದಲ್ಲಿ ಮಾಡಿಕೊಂಡ ಸ್ವಗೋಲಿನ ಎಡವಟ್ಟಿನಿಂದಾಗಿ ಕಳೆದ ಆವೃತ್ತಿಯ ಆತಿಥೇಯ ಕತಾರ್ ತಂಡ ಫಿಾ ವಿಶ್ವಕಪ್‌ನಲ್ಲಿ ಡ್ರಾ ಸಾಧಿಸಿ ಮೊದಲ ಬಾರಿ ಅಂಕ ಗಳಿಸಿದೆ. ಬಿ ಗುಂಪಿನ ಎಲ್ಲ ತಂಡಗಳ ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದು, ಮುಂದಿನ ಸುತ್ತಿಗೇರಲು ನಿಕಟ ಸ್ಪರ್ಧೆ ಏರ್ಪಡಲಿದೆ.
ಶನಿವಾರ ತಡರಾತ್ರಿ ಲೆವಿಸ್ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದ ಮೊದಲಾರ್ಧದಲ್ಲಿ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಸ್ವಿಜರ್ಲೆಂಡ್‌ಗೆ, ಕತಾರ್ ಗೋಲು ಕೀಪರ್ ಎಸಗಿದ ೌಲ್‌ನಿಂದ 17ನೇ ನಿಮಿಷದಲ್ಲಿ ಪೆನಾಲ್ಟಿ ದೊರೆಯಿತು. ಬ್ರಿಲ್ ಇಂಬೊಲೊ ಪಂದ್ಯದ ಮೊದಲ ಗೋಲು ಸಿಡಿಸಿ ಸ್ವಿಜರ್ಲೆಂಡ್‌ಗೆ ಮುನ್ನಡೆ ನೀಡಿದರು. ‘ಪ್ರತಿಯೊಂದು ಡ್ರಾ ಪಂದ್ಯ ನಮಗೆ ಸೋಲಿನ ಅನುಭವ ನೀಡಲಿದೆ. ನಾವೂ ಇದಕ್ಕಿಂತ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದವು. ಇಂದಿನ ಪ್ರದರ್ಶನ ಗೆಲುವು ಸಾಧಿಸಲು ಸಾಕಾಗಲಿಲ್ಲ’ ಎಂದು ಸ್ವಿಜರ್ಲೆಂಡ್‌ನ ಮಿಡ್ ಫೀಲ್ಡರ್ ಗ್ರಾನಿಥ್ ಕ್ಸಾಕ ಬೇಸರಿಸಿದರು.
ಸತತ ಆರನೇ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಆಡುತ್ತಿರುವ ಸ್ವಿಜರ್ಲೆಂಡ್ ಮೊದಲ ಬಾರಿ ಕ್ವಾರ್ಟರ್​ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದು, ಕಳೆದ ಆವೃತ್ತಿಯ 16ರ ಘಟ್ಟದಲ್ಲಿ ಪೋರ್ಚುಗಲ್ ವಿರುದ್ಧ 1-6 ರಿಂದ ಸೋತಿತ್ತು. ಏಷ್ಯನ್ ಚಾಂಪಿಯನ್ಸ್ ಕತಾರ್ ತಂಡ 2022ರ ಆವೃತ್ತಿಯ ಆತಿಥೇಯ ವಹಿಸಿಕೊಂಡರು ಎಲ್ಲ 4 ಲೀಗ್ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದರೊಂದಿಗೆ ಗುಂಪಿನ ಎಲ್ಲ ಪಂದ್ಯಗಳನ್ನು ಸೋತ ಮೊದಲ ಆತಿಥೇಯ ರಾಷ್ಟ್ರ ಎಂಬ ಅನಪೇಕ್ಷಿತ ದಾಖಲೆ ಬರೆದಿತ್ತು. ನಮ್ಮ ಶಿಸ್ತು, ಮನೋ ಸ್ಥೈರ್ಯದ ಪ್ರದರ್ಶನ ಇದಾಗಿದ್ದು, ಇಂದಿನ ಆಟ ಬಗ್ಗೆ ನಿಜಕ್ಕೂ ಹೆಮ್ಮೆಯಿಂದೆ ಎಂದು ಕತಾರ್ ಕೋಚ್ ಜೂಲಿನ್ ಲೊಪೆಟೆಗುಯಿ ಪಂದ್ಯದ ನಂತರ ಸಂತಸ ವ್ಯಕ್ತಪಡಿಸಿದರು.
ಕತಾರ್: 1
*ಮಿರೋ ಮುಹೈಮ್ (90+4, ಸ್ವಗೋಲು)
ಸ್ವಿಜರ್ಲೆಂಡ್: 1
*ಬ್ರಿಲ್ ಇಂಬೊಲೊ (17)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net