ಬಿರುಗಾಳಿಗೆ ಹಾರಿಬಿದ್ದ ಸಿಬ್ಬಂದಿ, 5 ನಿಮಿಷದ ಮಳೆಗೆ ಚರಂಡಿಯಂತಾದ ಗಡಾಫಿ: PSL ಅವಾಂತರ ಒಂದೆರಡಲ್ಲ! PSL 2026

ಬಿರುಗಾಳಿಗೆ ಹಾರಿಬಿದ್ದ ಸಿಬ್ಬಂದಿ, 5 ನಿಮಿಷದ ಮಳೆಗೆ ಚರಂಡಿಯಂತಾದ ಗಡಾಫಿ: PSL ಅವಾಂತರ ಒಂದೆರಡಲ್ಲ! PSL 2026
ಬಿರುಗಾಳಿಗೆ ಹಾರಿಬಿದ್ದ ಸಿಬ್ಬಂದಿ, 5 ನಿಮಿಷದ ಮಳೆಗೆ ಚರಂಡಿಯಂತಾದ ಗಡಾಫಿ: PSL ಅವಾಂತರ ಒಂದೆರಡಲ್ಲ! PSL 2026
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ವಿಶ್ವ ವಿಖ್ಯಾತಿ ಪಡೆದ ಇಂಡಿಯನ್​ ಪ್ರೀಮಿಯರ್​ ಲೀಗ್ ( IPL ) ನಡೆಯುತ್ತಿದೆ
  • ಪಾಕಿಸ್ತಾನದಲ್ಲಿ ಐಪಿಎಲ್​ ಖ್ಯಾತಿಯನ್ನು​ ಹಿಂದಿಕ್ಕಲು ಹೆಣಗಾಡುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ
  • ಮಾರ್ಚ್ 26 ರಂದು ಪ್ರಾರಂಭವಾದ ಪಿಎಸ್​ಎಲ್​ ಈ ಬಾರಿ ಅಭಿಮಾನಿಗಳಿಲ್ಲದೆ ನಡೆಯುತ್ತಿದೆ
PSL 2026 : ಭಾರತದಲ್ಲಿ ವಿಶ್ವ ವಿಖ್ಯಾತಿ ಇಂಡಿಯನ್​ ಪ್ರೀಮಿಯರ್​ ಲೀಗ್ ( IPL ) ನಡೆಯುತ್ತಿದ್ದರೆ, ಪಾಕಿಸ್ತಾನದಲ್ಲಿ ಐಪಿಎಲ್​ ಖ್ಯಾತಿಯನ್ನು​ ಹಿಂದಿಕ್ಕಲು ಹೆಣಗಾಡುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಮಾರ್ಚ್ 26 ರಂದು ಪ್ರಾರಂಭವಾದ ಪಿಎಸ್​ಎಲ್​, ಅಭಿಮಾನಿಗಳಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ, ಈ ಟೂರ್ನಮೆಂಟ್‌ಗೆ ಮಳೆ ಅಡ್ಡಿಯಾಯಿತು. ಈ ವೇಳೆ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಈಗಾಗಲೇ ಆರು ಪಂದ್ಯಗಳು ಪೂರ್ಣಗೊಂಡಿದೆ. ಈ ಟೂರ್ನಮೆಂಟ್ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ವಿವಾದಗಳು ಟೂರ್ನಿಗೆ ಸುತ್ತಿಕೊಳ್ಳುತ್ತಲೇ ಇದೆ. ಕೇವಲ ಕ್ರಿಕೆಟ್​ಗಿಂತ ವಿವಾದಗಳೇ ಹೆಚ್ಚು ಸದ್ದು ಮಾಡುತ್ತಿದೆ. ಆದರೂ, ಟೂರ್ನಿ ಮುಂದುವರಿದಿದೆ. ನಿನ್ನೆ ಸಂಜೆ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ನಡುವೆ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಆದರೆ, ಈ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಭಾರಿ ಗಾಳಿ ಆರಂಭವಾಯಿತು. 
ಮಳೆ ಬರುವ ಸೂಚನೆಗಳು ಸಿಕ್ಕ ತಕ್ಷಣ ಗಡಾಫಿ ಕ್ರೀಡಾಂಗಣದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಹೀಗಾಗಿ, ಕ್ರೀಡಾಂಗಣದ ಪಿಚ್​ ಅನ್ನು ಸಂಪೂರ್ಣವಾಗಿ ಟಾರ್ಪಲ್​ಗಳಿಂದ ಮಚ್ಚಲಾಯಿತು. ಆದರೆ, ಗಾಳಿಯ ತೀವ್ರತೆ ಮಾತ್ರ ಕಡಿಮೆ ಆಗಲಿಲ್ಲ. ಗಾಳಿ ರಭಸವಾಗಿ ಬೀಸುತ್ತಿದ್ದಂತೆ ಟಾರ್ಪ್​ಗಳನ್ನು ಹಿಡಿದಿದ್ದ ಮೈದಾನದ ಸಿಬ್ಬಂದಿ ಗಾಳಿಯ ರಭಸಕ್ಕೆ ಹಾರಿ ಬಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.
ವೈರಲ್​ ವಿಡಿಯೋಗಳನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಜೋರಾಗಿ ನಗುತ್ತಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ ವಿವಾದದಿಂದ ಮಾತ್ರವಲ್ಲ, ಬಿರುಗಾಳಿಯಿಂದಲೂ ಸಖತ್​ ಸುದ್ದಿ ಮಾಡುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 
5 ನಿಮಿಷದ ಮಳೆ ತಡೆಯದ ಗಡಾಫಿ
ಅಂದಹಾಗೆ, ನಿನ್ನೆ ಸುರಿದ ಕೇವಲ ಐದು ನಿಮಿಷಗಳ ಭಾರೀ ಮಳೆಗೆ ಗಡಾಫಿ ಕ್ರೀಡಾಂಗಣವು ಚರಂಡಿಯಾಗಿ ಮಾರ್ಪಟ್ಟಿತು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಮೈದಾನದಲ್ಲಿದ್ದ ನೀರನ್ನು ತೆರವುಗೊಳಿಸಲು ಸಿಬ್ಬಂದಿ ಪರದಾಡಿದರು. ಈ ಕ್ರೀಡಾಂಗಣದಲ್ಲಿ ಕಳಪೆ ಚರಂಡಿ ವ್ಯವಸ್ಥೆ ಇದೆ ಮತ್ತು ಛಾವಣಿಗಳು ಸದಾ ಸೋರುತ್ತಿರುತ್ತವೆ. ಕ್ರೀಡಾಂಗಣದ ಬಹುತೇಕ ಭಾಗ ಹಾನಿಯಾಗಿದೆ. ಇಡೀ ಕ್ರೀಡಾಂಗಣ ಪಾಕ್​ ಆರ್ಥಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಗಡಾಫಿ ಕ್ರೀಡಾಂಗಣವನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ.
ಅಂದಹಾಗೆ, ಪಾಕಿಸ್ತಾನ ಸೂಪರ್ ಲೀಗ್- 2026 ನಿತ್ಯವೂ ವಿವಾದಗಳಿಗೆ ಸಾಕ್ಷಿಯಾಗುತ್ತಿದೆ. ಮೊದಲ ದಿನ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ಜೆರ್ಸಿಗಳು ವಿವಾದಕ್ಕೆ ಕಾರಣವಾಯಿತು. ನಂತರ, ಶಾಹೀನ್ ಅಫ್ರಿದಿ ಮತ್ತು ಸಿಕಂದರ್ ರಾಜಾ ಅವರು ತಮ್ಮ ಕೋಣೆಗೆ ರಹಸ್ಯವಾಗಿ ಕೆಲವು ಜನರನ್ನು ಕರೆತಂದಿದ್ದಾರೆ ಎಂದು ಆರೋಪಿಸಲಾಯಿತು. ಇತ್ತೀಚಿನ ವಿವಾದವೆಂದರೆ ಚೆಂಡು ವಿರೂಪಗೊಳಿಸುವಿಕೆ. ಹೀಗೆ ಒಂದಲ್ಲ ಒಂದು ವಿವಾದಗಳು ಬೆಳಕಿಗೆ ಬರುತ್ತಲೇ ಇದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net