ಮೊಹಮ್ಮದ್ ಶಮಿ, ಅರ್ಷದೀಪ್ ಮತ್ತು ಪ್ರೀತಿ ಜಿಂಟಾ, ಪಂದ್ಯದ ಬಳಿಕ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ, ಅರ್ಷದೀಪ್ರನ್ನು ತಬ್ಬಿಕೊಂಡ ನಟಿ, ಶಭಾಷ್ಗಿರಿ ಕೊಟ್ಟರು. ಒಬ್ಬ ಫ್ಯಾನ್ ಬಾಯ್ ಕ್ಷಣವನ್ನು ನೆನಪಿಸಿದ ಪಂಜಾಬ್ ವೇಗಿ, ಖುಷಿಯಿಂದ ಮೈದಾನದಲ್ಲಿ ಸಂಭ್ರಮಿಸಿದ್ದು ನೋಡಿಗರ ಗಮನ ಸೆಳೆಯಿತು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.