ಐಪಿಎಲ್ 2026ರ​ ಹರಾಜಿಗೆ ಕ್ಷಣಗಣನೆ: ಈ ಐವರು ಸ್ಟಾರ್​ ಆಟಗಾರರ ಮೇಲೆಯೇ ಫ್ರಾಂಚೈಸಿಗಳ ಕಣ್ಣು!

ಐಪಿಎಲ್​ ಮಿನಿ ಹರಾಜು
ಐಪಿಎಲ್​ ಮಿನಿ ಹರಾಜು
Published on

ಪ್ರಮುಖ ಮುಖ್ಯಾಂಶಗಳು

  • ಇಂದು ದುಬೈನ ಅಬುಧಾಬಿಯಲ್ಲಿ ಐಪಿಎಲ್​ ಮಿನಿ ಹರಾಜು
  • ಒಟ್ಟು 359 ಆಟಗಾರರು ಆಕ್ಷನ್​ನಲ್ಲಿ ಭಾಗಿ
  • ಈ ಐವರು ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು
ನವದೆಹಲಿ: ಐಪಿಎಲ್ ಮಿನಿ ಹರಾಜಿಗೆ ಕೆಲವೇ ಕ್ಷಣಗಳು ಬಾಕಿಯಿದ್ದು, ಇಂದು (ಡಿ.16) ದುಬೈನಲ್ಲಿ ಆಕ್ಷನ್​ ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ಎಷ್ಟು ಭಾರತೀಯ ಮತ್ತು ವಿದೇಶಿ ಆಟಗಾರರು ಇರಲಿದ್ದಾರೆ ಎಂಬುದರ ಪಟ್ಟಿ ಈಗಾಗಲೇ ಹೊರಬಿದ್ದಿದೆ. ಫ್ರಾಂಚೈಸಿಗಳ ಜೇಬು ಸ್ವಲ್ಪ ಭಾರವಾಗಿದ್ದೇ ಆದರೂ ಅತ್ಯುತ್ತಮ ಮತ್ತು ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕುವ ಪೈಪೋಟಿ ಖಂಡಿತ ಜೋರಾಗಿರಲಿದೆ. ಈ ಮಧ್ಯೆ, ಐವರು ಸ್ಟಾರ್​ ಆಟಗಾರರ ಮೇಲೆ 10 ತಂಡಗಳ ಚಿತ್ತ ಮೂಡಿದೆ.
ದುಬೈನ ಅಬು ಧಾಬಿಯಲ್ಲಿ ನಡೆಯಲಿರುವ ಐಪಿಎಲ್​ 2026ರ ಮಿನಿ ಹರಾಜಿನಲ್ಲಿ 10 ಬಲಿಷ್ಠ ಫ್ರಾಂಚೈಸಿಗಳು ಭಾಗಿಯಾಗಲಿದ್ದು, ಬಿಸಿಸಿಐ ಕೊಟ್ಟಿರುವ ನಿಯಮಾನುಸಾರ ಪ್ರಕ್ರಿಯೆ ನಡೆಯಲಿದೆ. ಪಟ್ಟಿ ಹೊರಬಿಟ್ಟಿರುವ ಕ್ರಿಕೆಟ್​ ಮಂಡಳಿ, ಆರಂಭದಲ್ಲಿ 350 ಆಟಗಾರರು ಹರಾಜಿಗೆ ಬರಲಿದ್ದಾರೆ ಎಂದು ತಿಳಿಸಿತ್ತು. ಆದರೆ, ನಂತರದಲ್ಲಿ ಇದನ್ನು ಕೊಂಚ ಬದಲಿಸಿ, ಹೆಚ್ಚುವರಿ 9 ಕ್ರಿಕೆಟಿಗರನ್ನು ಪಟ್ಟಿಗೆ ಸೇರಿಸಿತು. ಈ ಮೂಲಕ ಒಟ್ಟು 359 ಆಟಗಾರರು ಆಕ್ಷನ್​ನಲ್ಲಿ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಬಿಡ್ಡಿಂಗ್‌ಗೆ ಲಭ್ಯವಿರುವ ಒಟ್ಟು ಆಟಗಾರರಲ್ಲಿ 244 ಭಾರತೀಯರು, 115 ಮಂದಿ ಓವರ್​ಸೀಸ್​ ಪ್ಲೇಯರ್​ಗಳಿದ್ದಾರೆ. ಹರಾಜು ಎಂಟು ವಿಭಿನ್ನ ಮೂಲ ಬೆಲೆ ಸ್ಲ್ಯಾಬ್‌ಗಳನ್ನು ಫಾಲೋ ಮಾಡಲಿದೆ. ಫ್ರಾಂಚೈಸಿಗಳು ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡುವುದು ಅಗತ್ಯತೆ. ಇದರಲ್ಲಿ ಕೇವಲ 31 ವಿದೇಶಿ ಆಟಗಾರರಿಗೆ ಸ್ಥಾನ ಮೀಸಲಿಡಲಾಗಿದೆ. ವರದಿಗಳ ಪ್ರಕಾರ, ಈ ಬಾರಿಯ ಹರಾಜಿನಲ್ಲಿ ಐವರು ಸ್ಟಾರ್​ ಆಲ್​ರೌಂಡ್​ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಅಸಲಿಗೆ, ಈ ಐವರನ್ನು ದುಬಾರಿ ಮೊತ್ತಕ್ಕೆ ಬಿಡ್​ ಮಾಡುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್​ ವರದಿಗಳು ತಿಳಿಸಿವೆ.

ಇಲ್ಲಿದೆ ನೋಡಿ ಪಟ್ಟಿ

  1. ಕ್ಯಾಮರಾನ್​ ಗ್ರೀನ್​ (ಓವರ್​ಸೀಸ್ ಪ್ಲೇಯರ್​​)
  2. ರವಿ ಬಿಷ್ಣೋಯಿ (ಭಾರತೀಯ ಪ್ಲೇಯರ್​)
  3. ಮತೀಶಾ ಪತಿರಾಣ (ಓವರ್​ಸೀಸ್​ ಪ್ಲೇಯರ್​)
  4. ಲಿಯಾಮ್​ ಲಿವಿಂಗ್​ಸ್ಟೋನ್​ (ಓವರ್​ಸೀಸ್ ಪ್ಲೇಯರ್​​)
  5. ವೆಂಕಟೇಶ್​ ಅಯ್ಯರ್​ (ಭಾರತೀಯ ಪ್ಲೇಯರ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net