IPL-2026: ಎಮರ್ಜಿಂಗ್​ ಪ್ಲೇಯರ್​ ಪ್ರಶಸ್ತಿಗೆ ಮತದಾನ ಶುರು; ರೇಸ್​ನಲ್ಲಿ ಸೂರ್ಯವಂಶಿ, ಕನ್ನಡಿಗ ಯಶ್​ರಾಜ್​

ಎಮರ್ಜಿಂಗ್​ ಪ್ಲೇಯರ್​ ಪ್ರಶಸ್ತಿಗೆ ಮತದಾನ ಶುರು
ಎಮರ್ಜಿಂಗ್​ ಪ್ಲೇಯರ್​ ಪ್ರಶಸ್ತಿಗೆ ಮತದಾನ ಶುರು
Published on
ನವದೆಹಲಿ: ಐಪಿಎಲ್​ 19ನೇ ಆವೃತ್ತಿಯ ಉದಯೋನ್ಮುಖ ಆಟಗಾರರ ಪ್ರಶಸ್ತಿ (Emerging Player of the Season award) ರೇಸ್​ನಲ್ಲಿರುವ ಯುವ ಕ್ರಿಕೆಟಿಗರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದ್ದು, ಆನ್​ಲೈನ್​ ಮತದಾನದ ಮೂಲಕ ಅವರಲ್ಲಿ ಒಬ್ಬರನ್ನು ಪ್ರಶಸ್ತಿಗೆ ಆರಿಸುವ ಅವಕಾಶವನ್ನೂ ಅಭಿಮಾನಿಗಳಿಗೆ ಕಲ್ಪಿಸಿದೆ.

2000ದ ಏಪ್ರಿಲ್​ 1ರ ನಂತರ ಜನಿಸಿರುವವರು, ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದವರು, 25ಕ್ಕಿಂತ ಕಡಿಮೆ ಐಪಿಎಲ್​ ಪಂದ್ಯ ಆಡಿರುವವರು ಮತ್ತು ಹಿಂದೆ ಈ ಪ್ರಶಸ್ತಿ ಗೆಲ್ಲದಿರುವವರನ್ನು ಬಿಸಿಸಿಐ ನಾಮನಿರ್ದೇಶನ ಮಾಡಿದೆ. ಐಪಿಎಲ್​ ವೆಬ್​ಸೈಟ್​ನಲ್ಲಿ ಅಭಿಮಾನಿಗಳು ಮತದಾನ ಮಾಡಬಹುದು.

ರಾಜಸ್ಥಾನ ರಾಯಲ್ಸ್​ ತಂಡದ ಸ್ಟಾರ್​ ವೈಭವ್​ ಸೂರ್ಯವಂಶಿ, ಕನ್ನಡಿಗ ಯಶ್​ರಾಜ್​ ಪೂಂಜಾ, ಪಂಜಾಬ್​ನ ಪ್ರಿಯಾಂಶ್​ ಆರ್ಯ, ಆರ್​ಸಿಬಿಯ ರಸಿಕ್​ ದಾರ್​, ಸನ್​ರೈಸರ್ಸ್​ನ ಸಾಕಿಬ್​ ಹುಸೈನ್​, ಪ್ರಫುಲ್​​ ಹಿಂಗೆ, ಲಖನೌದ ಪ್ರಿನ್ಸ್​ ಯಾದವ್​, ಮುಕುಲ್​ ಚೌಧರಿ, ಡೆಲ್ಲಿಯ ಸಮೀರ್​ ರಿಜ್ವಿ, ಸಿಎಸ್​ಕೆಯ ಆಯುಷ್​ ಮಹಾತ್ರೆ, ಗುಜರಾತ್​ನ ಅಶೋಕ್​ ಶರ್ಮ, ಕೆಕೆಆರ್​ನ ಅಂಗಕೃಷ್​ ರುವಂಶಿ ಪ್ರಶಸ್ತಿ ರೇಸ್​ನಲ್ಲಿರುವ ಪ್ರಮುಖರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net