ಕೇರಳದ ಕಾಸರಗೋಡು ಜಿಲ್ಲೆಯ ಲಾರ್ಡ್ಸ್ ಮೈದಾನದಲ್ಲಿ ಈ ಬಾರಿ ಟೂರ್ನಿ ನಡೆಯಿತು. ನ್ಯಾಯವಾದಿ ಅಶ್ರಫ್ ಕನ್ಯಾರಕೋಡಿ ಮಾಲಕತ್ವದ, ಸಾಬಿತ್ ಕುಂಬ್ರ ನಾಯಕತ್ವದ ಎಮಾರ್ ಸ್ಟ್ರೈಕರ್ಸ್ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿ, ಅಧಿಕಾರಯುತವಾಗಿ ಕಿರೀಟ ಮುಡಿಗೇರಿಸಿಕೊಂಡಿತು. ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಹಕೀಮ್ ಪದಡ್ಕ ಮಾಲಕತ್ವದ, ರಾಝಿಕ್ ಬಿ.ಎಂ. ನಾಯಕತ್ವದ ಅಟ್ಯಾಕರ್ಸ್ ತಂಡ ಈ ಬಾರಿ ಅತ್ಯಾಕರ್ಷಕ ಆಟದ ಮೂಲಕ ಗಮನ ಸೆಳೆಯುವುದರ ಜೊತೆಗೆ, ಫೈನಲ್ ಕೂಡಾ ಪ್ರವೇಶಿಸಿತು. ಆದರೆ ಫೈನಲ್‌ನಲ್ಲಿ ಎಮಾರ್ ತಂಡದ ವಿರುದ್ಧ ವೀರೋಚಿತ ಸೋಲು ಕಂಡು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.