ಲಾಂಚರ್ ಹಿಡಿದು ಪ್ರೀತಿಯ ಮಳೆ; ಹಿಂಭಾಗದ ಗ್ಯಾಲರಿಯಲ್ಲಿದ್ದವರಿಗೂ ತಲುಪಿತು ಜಿಂಟಾ ಉಡುಗೊರೆ... Preity Zinta

Preity Zinta ಚಿತ್ರ Instagram
Preity Zinta ಚಿತ್ರ Instagram
Published on
ಮುಲ್ಲನ್‌ಪುರ: ಐಪಿಎಲ್ 2026ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಏರಿಳಿತಗಳ ಹಾದಿಯಲ್ಲಿ ಸಾಗುತ್ತಿದೆ. ಮಂಗಳವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡವು ಸೋಲನ್ನು ಅನುಭವಿಸಿರಬಹುದು, ಆದರೆ ಆ ಸೋಲಿನ ನಡುವೆಯೂ ತಂಡದ ಒಡತಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಮ್ಮ ಅಪಾರ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಭಿಮಾನಿಗಳಿಗೆ ಕಿಟ್‌ ವಿತರಿಸಿದ ಪ್ರೀತಿ ಜಿಂಟಾ

ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರೀತಿ ಜಿಂಟಾ ನ್ಯೂ ಚಂಡೀಗಢದ ನ್ಯೂ ಇಂಟರ್​ನ್ಯಾಷನಲ್​ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಜೆರ್ಸಿಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು.
ಇದಾದ ಬಳಿಕ ಗ್ಯಾಲರಿಯ ಹಿಂಭಾಗದಲ್ಲಿ ಕುಳಿತಿದ್ದ ಅಭಿಮಾನಿಗಳಿಗೂ ಉಡುಗೊರೆ ತಲುಪಬೇಕು ಎಂಬ ಉದ್ದೇಶದಿಂದ ಪ್ರೀತಿ ಜಿಂಟಾ ಅವರು 'ಬಾಲ್ ಲಾಂಚರ್' ಬಳಸಿದರು. ಅದರ ಮೂಲಕ ಚೆಂಡುಗಳನ್ನು ಮತ್ತು ಉಡುಗೊರೆಗಳನ್ನು ಲಾಂಚ್ ಮಾಡುವ ಮೂಲಕ ದೂರದ ಸ್ಟ್ಯಾಂಡ್ಸ್‌ನಲ್ಲಿದ್ದವರಿಗೂ ತಲುಪಿಸಿದರು.
ವೈರಲ್ ಆದ ಜಿಂಟಾ ಪ್ರತಿಕ್ರಿಯೆ
ನ್ಯೂ ಚಂಡೀಗಢದ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದಂತೆ, ಪ್ರೀತಿ ತಮ್ಮ ತಂಡದವರಿಗಾಗಿ ಉತ್ಸಾಹದಿಂದ ಬೆರೆಯುವುದನ್ನು ಕಾಣಬಹುದು. ಆದಾಗ್ಯೂ, ಪ್ರಿಯಾಂಶ್ ಆರ್ಯ ಅವರ ಅದ್ಭುತ ಸಿಕ್ಸ್ ಓವರ್ ಕವರ್ ಮತ್ತು ಶ್ರೇಯಸ್ ಅಯ್ಯರ್ ಅವರ ಎಲ್‌ಬಿಡಬ್ಲ್ಯೂ ನಿರ್ಧಾರಕ್ಕೆ ಅವರ ಪ್ರತಿಕ್ರಿಯೆ ಸೋಶಿಯಲ್​ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿತು.

ಮೊದಲ ಸೋಲಿನ ಹೊರತಾಗಿಯೂ ಪಂಜಾಬ್ ಅಗ್ರಸ್ಥಾನದಲ್ಲಿ

ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಇದು ಮೊದಲ ಸೋಲಾಗಿದೆ. ಆದಾಗ್ಯೂ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​ ಕಿಂಗ್ಸ್​ ಪ್ರಭ್ಸಿಮ್ರಾನ್​ ಸಿಂಗ್​ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ಅರ್ಧಶತಕಗಳ ಸಹಾಯದಿಂದ 222/4 ಸ್ಕೋರ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಜಸ್ಥಾನ್ ರಾಯಲ್ಸ್ ಕೊನೆಯ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಡೊನೊವನ್ ಫೆರೇರಾ ಅವರ ಅರ್ಧಶತಕಗಳ ಮೂಲಕ ಸ್ಕೋರ್ ಅನ್ನು ಬೆನ್ನಟ್ಟಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net