

ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ (
Rishabh Pant
) ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್ ಸಿಡಿಸಿದ ವಿಶ್ವದ 4ನೇ ಆಟಗಾರ ಮತ್ತು ಮೊದಲ ಭಾರತೀಯ ಎನಿಸಿದ್ದಾರೆ. ಅಲ್ಲದೆ 51ನೇ ಪಂದ್ಯದಲ್ಲೇ ಈ ಮೈಲಿಗಲ್ಲು ನೆಡುವ ಮಾಡುವ ಮೂಲಕ ಅತಿವೇಗದ ಸಾಧಕ ಎನಿಸಿದ್ದಾರೆ.
ಟೆಸ್ಟ್ನಲ್ಲಿ ಅವರು ಎದುರಿಸಿದ ಪ್ರತಿ 49.34 ಎಸೆತಕ್ಕೊಂದರಂತೆ ಸಿಕ್ಸರ್ ಸಿಡಿಸಿದ್ದಾರೆ.
ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ 82 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ಅತಿವೇಗ. ಬೆನ್ ಸ್ಟೋಕ್ಸ್ (138), ನ್ಯೂಜಿಲೆಂಡ್ನ ಬ್ರೆಂಡನ್ ಮೆಕ್ಕಲಂ (107) ಮತ್ತು ಆಸ್ಟ್ರೆಲಿಯಾದ ಆಡಂ ಗಿಲ್ಕ್ರಿಸ್ಟ್ (100) ಸಿಕ್ಸರ್ಗಳ ಶತಕ ಸಿಡಿಸಿದ ಹಿಂದಿನ ಮೂವರು ಸಾಧಕರು. ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮ ತಲಾ 91 ಸಿಕ್ಸರ್ ಸಿಡಿಸಿರುವುದು ಭಾರತೀಯರ ಪೈಕಿ ನಂತರದ ಗರಿಷ್ಠವೆನಿಸಿದೆ.
ಪಂತ್ 4918 ಎಸೆತಗಳಲ್ಲೇ ಸಿಕ್ಸರ್ಗಳ ಶತಕ ಪೂರೈಸಿದ್ದಾರೆ. ಗಿಲ್ಕ್ರಿಸ್ಟ್ 6,578 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ಅತಿವೇಗವೆನಿಸಿತ್ತು. ಪಂತ್ ಅವರ 100 ಸಿಕ್ಸರ್ಗಳಲ್ಲಿ 76 ಸ್ಪಿನ್ನರ್ಗಳ ವಿರುದ್ಧವೇ ಬಂದಿವೆ. ಜಾಕ್ ಲೀಚ್ ಮತ್ತು ಶೋಯಿಬ್ ಬಶೀರ್ ಎಸೆತಗಳಲ್ಲಿ ಗರಿಷ್ಠ ತಲಾ 9 ಸಿಕ್ಸರ್ ಬಾರಿಸಿದ್ದಾರೆ. ಪಂತ್ ಟೆಸ್ಟ್ನಲ್ಲಿ ಇದುವರೆಗೆ ಗಳಿಸಿರುವ 3,662 ರನ್ಗಳಲ್ಲಿ ಶೇ.16.4 ರನ್ಗಳು ಸಿಕ್ಸರ್ ಮೂಲಕವೇ ಬಂದಿವೆ.