ಸ್ಮೃತಿ ಮಂಧಾನಾಳ ಬಾಲ್ಯ ಸ್ನೇಹಿತನಿಗೆ ಟೋಪಿ ಹಾಕಿದ ಪಲಾಶ್ ಮುಚ್ಚಲ್? ಸಿನಿಮಾ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ! Palash Muchhal

 ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್
ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್​ ಆಟಗಾರ್ತಿ ಸ್ಮೃತಿ ಮಂಧಾನರನ್ನು ಮದುವೆಯಾಗಬೇಕಿದ್ದ ಪಲಾಶ್ ಮುಚ್ಚಲ್
  • ಸ್ಮೃತಿ ಮಂಧಾನಾನ ಬಾಲ್ಯ ಸ್ನೇಹಿತನಿಗೆ ವಂಚನೆ ಮಾಡಿರುವ ಪಲಾಶ್ ಮುಚ್ಚಲ್
  • ಪಲಾಶ್ ಮುಚ್ಚಲ್ ಬಾಲಿವುಡ್​ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ
ಮುಂಬೈ: ಕೆಲ ತಿಂಗಳುಗಳ ಹಿಂದೆ ಭಾರತೀಯ ಕ್ರಿಕೆಟ್​ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ (Palash Muchhal) ವಿವಾಹ ರದ್ದಾದ ಸುದ್ದಿ ಎಲ್ಲಡೆ ವೈರಲ್​ ಆಗಿತ್ತು.
ಈದೀಗ ಸ್ಮೃತಿ ಮಂಧಾನರನ್ನ ಮದುವೆಯಾಗಬೇಕಿದ್ದ  ಪಲಾಶ್ ಮುಚ್ಚಲ್ ವಿರುದ್ಧ ಸಾಂಗ್ಲಿಯ ವ್ಯಕ್ತಿಯೊಬ್ಬನಿಗೆ ವಂಚಿಸಿದ ಹಿನ್ನಲೆ ಪ್ರಕರಣ ದಾಖಲಾಗಿದೆ. ಬುಧವಾರ (ಜ.21)  ಸಾಂಗ್ಲಿ ಜಿಲ್ಲಾ ಪೊಲೀಸರು ದಾಖಲಿಸಿರುವ ದೂರಿನ ಪ್ರಕಾರ, ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಸಾಂಗ್ಲಿ ಮೂಲದ ವ್ಯಕ್ತಿಗೆ 40 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 
ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತ ಮತ್ತು ವೃತ್ತಿಯಲ್ಲಿ ಚಲನಚಿತ್ರ ಹಣಕಾಸುದಾರರಾಗಿರುವ ವೈಭವ್ ಮಾನೆ ಅವರನ್ನು  ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನ ಅವರು ಪಲಾಶ್ ಮುಚ್ಚಲ್​ಗೆ ಪರಿಚಯಿಸಿದ್ದರು. ಚಿತ್ರ ನಿರ್ಮಾಣಕ್ಕಾಗಿ ಮುಚ್ಚಲ್ ತಮ್ಮಿಂದ ಹಣ ಪಡೆದಿದ್ದರು ಆದರೆ ಆ ಸಿನಿಮಾ ಕಾರ್ಯರೂಪಕ್ಕೆ ಬರಲಿಲ್ಲ ಹಾಗೂ ನನ್ನ ಹಣವನ್ನು ಹಿಂತಿರುಗಿಸಿದೆ ವಂಚಿಸಿದ್ದಾರೆ ಎಂದು ದೂರುದಾರ ವೈಭವ್ ಮಾನೆ ಆರೋಪಿಸಿದ್ದಾರೆ.

ಪಲಾಶ್ ಮುಚ್ಚಲ್ ಅವರು ನಜರಿಯಾ ಎಂಬ ಹೆಸರಿನ ಚಿತ್ರದ ನಿರ್ಮಾಣದಲ್ಲಿ ಹೂಡಿಕೆ ಮಾಡುವ ಪ್ರಸ್ತಾವನೆಯೊಂದಿಗೆ ತಮ್ಮನ್ನು ಸಂಪರ್ಕಿಸಿದ್ದರು, ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಲಾಭ ದೊರೆಯಲಿದೆ ಎಂದು ಹೇಳಿದ್ದರು. ಈ ಭರವಸೆಗಳ ಆಧಾರದಲ್ಲಿ ನಾನು 40 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ನಗದು ಮತ್ತು ಗೂಗಲ್ ಪೇ ಮೂಲಕ ಪಲಾಶ್​ಗೆ ಹಣ ನೀಡಿರುವ ದಾಖಲೆಗಳನ್ನು ಮಾನೆ ಪೊಲೀಸರಿಗೆ ಸಲ್ಲಿಸಿದ್ದಾರೆ.
ಆದರೆ ಯಾವಾಗ ಈ ತೆರೆ ಕಾಣುವುದು ಸಾಧ್ಯವಿಲ್ಲ ಎಂದು ತಿಳಿಯಿತೋ ಅಂದಿನಿಂದ ನನ್ನ ಹಣವನ್ನು ಹಿಂತಿರುಗಿಸುವಂತೆ ಮಚ್ಚಲ್​ಗೆ ಕೇಳಿದೆ. ಆರಂಭದಲ್ಲಿ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿದ ಪಲಾಶ್​ ನಂತರದ ದಿನಗಳಲ್ಲಿ ನನ್ನ ಪೋನ್​ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿಬಿಟ್ಟರು ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ವೈಭವ್​ ಮಾನೆ ನೀಡಿರುವ ದೂರನ್ನು ಸ್ವೀಕರಿಸಿದ್ದು, ಒದಗಿಸಲಾಗಿರುವ ದಾಖಲೆಗಳ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net