ಸ್ಮೃತಿ ಮತ್ತು ಪಲಾಶ್ ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಅವರ ಮದುವೆ ರದ್ದಾಗಿದೆ ಎಂಬ ವದಂತಿಗಳು ಹರಡಿವೆ. ಅಲ್ಲದೆ, ಪಲಾಶ್ಗೆ ಬೇರೊಂದು ಯುವತಿಯ ಜತೆ ಸಂಬಂಧ ಇದೆ ಅನ್ನೋ ವದಂತಿ ಕೂಡ ಹರಡಿದೆ. ಇದೆಲ್ಲದರ ನಡುವೆ ಪಲಾಶ್ ಅವರ ತಾಯಿ ಅಮಿತಾ ಮುಚ್ಚಲ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಪಲಾಶ್ ಅವರು ಸ್ಮೃತಿಗಿಂತಲೂ ಅವರ ತಂದೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಹೃದಯಾಘಾತವಾಗಿದೆ ಎಂಬ ಸುದ್ದಿ ತಿಳಿದಾಗ ಸ್ಮೃತಿಗಿಂತ ಪಲಾಶ್ ತುಂಬಾ ಅತ್ತರು. ಅಲ್ಲದೆ, ಮದುವೆ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದೇ ಪಲಾಶ್ ಎಂದು ಅಮಿತಾ ಅವರು ಹೇಳಿದರು. ಸದ್ಯ ಅಮಿತಾ ಅವರು ನೀಡಿರುವ ಹೇಳಿಕೆ ಪ್ರಕಾರ ಸ್ಮೃತಿ ಮತ್ತು ಪಲಾಶ್ ಮದುವೆ ನಡಯಲಿದೆ. ಆದರೆ, ಯಾವಾಗ ಅನ್ನೋ ಪ್ರಶ್ನೆ ಮಾತ್ರ ಇನ್ನೂ ಜೀವಂತವಾಗಿಯೇ ಉಳಿಯಲಿದೆ. ಆ ಪ್ರಶ್ನೆಗೆ ಯಾವಾಗ ಉತ್ತರ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).