ವರದಿಗಳ ಪ್ರಕಾರ, ತಂಡದ ಮೆಂಟರ್ ಮತ್ತು ಅಘೋಷಿತ ಮುಖ್ಯ ಕೋಚ್ ವಹಾಬ್ ರಿಯಾಜ್ ಹಾಗೂ ಪಾಕ್ ಕ್ಯಾಪ್ಟನ್ ಫಾತಿಮಾ ಸನಾ ನಡುವೆ ಆಟಗಾರ್ತಿಯರ ಆಯ್ಕೆ ವಿಚಾರವಾಗಿ ದೊಡ್ಡ ಜಗಳ ನಡೆದಿದೆ ಎಂದು ವರದಿಯಾಗಿದೆ. ಇದರೊಟ್ಟಿಗೆ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ, ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ಅವರ ಪತಿ ಅಲಿ ಯೂನಿಸ್, ಮಹಿಳೆಯರ ತಂಡದ ಆಟಗಾರ್ತಿಯರು ಉಳಿದಿದ್ದ ಹೋಟೆಲ್ ರೂಮ್‌ನಲ್ಲೇ ಮಲಗಿದ್ದಕ್ಕೆ ಫಾತಿಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಟ್ಟು ಹಿಡಿದ ಸನಾ, ಕಡೆಗೂ ರೂಮ್‌ನಿಂದ ಯೂನಿಸ್ರನ್ನು ಹೊರಗೆ ಕಳುಹಿಸಿದರು.