ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಜಹೀರ್ ಅಬ್ಬಾಸ್, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ತಮ್ಮ ಫಿಟ್ನೆಸ್ ಬಗ್ಗೆ ಇನ್ನಷ್ಟು ಗಮನ ಹರಿಸಬೇಕು. ಉಳಿದಂತೆ ಅವರ ಬ್ಯಾಟಿಂಗ್ ಬಗ್ಗೆ ಯಾವುದೇ ಅನುಮಾನವಿಲ್ಲ. ಇನ್ನು, ವಿರಾಟ್ ಕೊಹ್ಲಿ ಈಗಾಗಲೇ ಉತ್ತಮ ಫಿಟ್ನೆಸ್ ಹಾಗೂ ಫಾರ್ಮ್ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ರೋಹಿತ್ ಆಡಿದ 138 ರನ್‌ಗಳ ಆಕರ್ಷಕ ಇನ್ನಿಂಗ್ಸ್ ನನಗೆ ಬಹಳ ಖುಷಿ ನೀಡಿತು ಎಂದು ಅಬ್ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).