ಭಾರತ ಎದುರು ಸೋಲು, ಸಹಿಸಲಾಗದ ಅವಮಾನ! ಕಡೆಗೂ ಇಬ್ಬರು ಪಾಕ್​ ಆಟಗಾರರಿಗೆ ತಂಡದಿಂದ ಗೇಟ್​ಪಾಸ್​ | Pakistan

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಫೆ.15ರಂದು ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯ
  • ಈ ಪಂದ್ಯದಲ್ಲಿ 61 ರನ್​ಗಳಿಂದ ಹೀನಾಯ ಸೋಲುಂಡ ಪಾಕ್​
  • ಸೋತ ಬೆನ್ನಲ್ಲೇ ಭಾರೀ ಆಕ್ರೋಶ, ಟೀಕೆಗಳ ಸುರಿಮಳೆ
  • ಅವಮಾನ ಸಹಿಸಲಾಗದೆ ಇಬ್ಬರು ಆಟಗಾರರಿಗೆ ತಂಡದಿಂದ ಗೇಟ್​ಪಾಸ್​
Pakistan: ಫೆ.15ರಂದು ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಮತ್ತೆ ಪಾಕ್​ ತಂಡಕ್ಕೆ ಮಣ್ಣು ಮುಕ್ಕಿಸಿತು. ಭಾರತಕ್ಕೆ ಇದು 8ನೇ ಗೆಲುವು ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ, ಹೀನಾಯ ಸೋಲುಂಡ ಪಾಕ್​ಗೆ ಭಾರೀ ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ. ಈ ಅವಮಾನ ತಾಳಲಾರದ ಪಿಸಿಬಿ, ಇದೀಗ ಇಬ್ಬರು ಸ್ಟಾರ್​ ಆಟಗಾರರನ್ನು ತಂಡದಿಂದ ಕೈಬಿಡಲು ಮುಂದಾಗಿದೆ.

ಸಾಲು ಸಾಲು ಟೀಕೆ, ಅವಮಾನ

61 ರನ್​ಗಳಿಂದ ಟೀಮ್ ಇಂಡಿಯಾ ಎದುರು ಮಂಡಿಯೂರಿದ ಪಾಕಿಸ್ತಾನಕ್ಕೆ ಮುಂದಿನ ಪಂದ್ಯದಲ್ಲಿಯೂ ಸೋಲಿನ ಭೀತಿ ಕಾಡಲಾರಂಭಿಸಿದೆ. ಒಂದೆಡೆ, ಭಾರತ ವಿರುದ್ಧ ಸೋಲುಂಡ ಬೆನ್ನಲ್ಲೇ ಪಾಕಿಸ್ತಾನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಮಾಜಿ ಕ್ರಿಕೆಟಿಗರಾದ ವಾಸಿಮ್ ಅಕ್ರಂ, ಶೋಯೆಬ್​ ಅಕ್ತರ್​, ಶಾಹಿದ್​ ಆಫ್ರಿದಿ ಸೇರಿದಂತೆ ಹಲವು ಮಾಜಿ ಹಿರಿಯ ಆಟಗಾರರು ತಂಡದಿಂದ ಕೆಲವರನ್ನು ಹೊರಗಿಡುವಂತೆ ಪಿಸಿಬಿಗೆ ಒತ್ತಾಯಿಸಿದ್ದಾರೆ.

ಇವರಿಬ್ಬರಿಗೂ ಗೇಟ್​ಪಾಸ್​

ಭಾರೀ ಆಕ್ರೋಶ, ಸಹಿಸಲಾಗದ ಅವಮಾನಗಳ ಬೆನ್ನಲ್ಲೇ ಪಾಕ್​ ಕ್ರಿಕೆಟ್​ ಮಂಡಳಿ ಇದೀಗ ನಮೀಬಿಯಾ ವಿರುದ್ಧದ ಮುಂದಿನ ಪಂದ್ಯಕ್ಕೆ ಟಿ20 ವಿಶ್ವಕಪ್​ ತಂಡದಿಂದ ಬಾಬರ್​ ಅಜಮ್​ ಮತ್ತು ಶಾಹೀನ್​ ಶಾ ಆಫ್ರಿದಿಯನ್ನು ಕಿತ್ತುಬಿಸಾಡಲು ನಿರ್ಧರಿಸಿದೆ. ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ತೆಗದುಹಾಕಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಇವರಿಬ್ಬರ ಸ್ಥಾನಕ್ಕೆ ಯಾರು?

"ಬುಧವಾರ (ಫೆ.18) ನಮೀಬಿಯಾ ವಿರುದ್ಧದ ಪಂದ್ಯದಿಂದ ಬಾಬರ್ ಮತ್ತು ಶಾಹೀನ್​ರನ್ನು ಕೈಬಿಡಲಿರುವ ಮ್ಯಾನೇಜ್​ಮೆಂಟ್​, ಇವರಿಬ್ಬರ ಸ್ಥಾನಕ್ಕೆ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದೇನಾದರೂ ಆಗಿದ್ದೇ ಆದರೆ, ಇಲ್ಲಿಗೆ ಬಾಬರ್​ ಮತ್ತು ಶಾಹೀನ್​ರ ವಿಶ್ವಕಪ್​ ಪಯಣ ಅಂತ್ಯಗೊಳ್ಳುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಅವಕಾಶಗಳ ಕೊರೆತಯೂ ಕಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net