ಇದೇನಾದರೂ ಸಂಭವಿಸಿದ್ರೆ ಮಾತ್ರ... ಆಂಗ್ಲರ ವಿರುದ್ಧ ಹೀನಾಯವಾಗಿ ಸೋತರೂ ಪಾಕ್​ಗಿದೆ ಸೆಮೀಸ್​ ಚಾನ್ಸ್​​! Pakistan

ಪಾಕ್​ ಕ್ರಿಕೆಟ್​ ತಂಡ
ಪಾಕ್​ ಕ್ರಿಕೆಟ್​ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆಯ (ಫೆ.24) ಸೂಪರ್​-8 ಪಂದ್ಯದಲ್ಲಿ ಪಾಕ್​ ವಿರುದ್ಧ ಇಂಗ್ಲೆಂಡ್​ಗೆ ರೋಚಕ ಜಯ
  • ಗ್ರೂಪ್​ 2ರಿಂದ ಇಂಗ್ಲೆಂಡ್​ ನೇರ ಸೆಮೀಸ್​ಗೆ ಎಂಟ್ರಿ
  • ಆಂಗ್ಲರ ವಿರುದ್ಧ ಹೀನಾಯವಾಗಿ ಸೋತರೂ ಸಲ್ಮಾನ್​ ಅಘಾ ಪಡೆಗಿದೆ ಇನ್ನೂ ಒಂದು ಚಾನ್ಸ್​
  • ಇದೇನಾದರೂ ಸಂಭವಿಸಿದರೆ ಮಾತ್ರ ಸೆಮೀಸ್​ ಕನಸು ಪೂರ್ಣ
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ನಡೆಯುತ್ತಿರುವ ಸೂಪರ್-8 ಕದನದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದ ಇಂಗ್ಲೆಂಡ್​, ನೇರವಾಗಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಉತ್ತಮ ರನ್​ರೇಟ್​ ಹಾಗೂ ಅಂಕಗಳಿಂದ ಗ್ರೂಪ್​ ಬಿಯಲ್ಲಿ ಅಗ್ರಸ್ಥಾನಕ್ಕೇರಿದ ಆಂಗ್ಲರ ಪಡೆ, ಈಗ ಫೈನಲ್​ಗೆ ಹೋಗುವ ತವಕದಲ್ಲಿದೆ. ಈ ಮಧ್ಯೆ, ಪಾಕಿಸ್ತಾನ ತಂಡಕ್ಕೆ ಸೆಮೀಸ್​ ಕನಸು ಬಹುತೇಕ ಭಗ್ನಗೊಂಡಿದ್ದೇ ಆದರೂ ಒಂದೇ ಒಂದು ಚಾನ್ಸ್​ ಇದೆ. ಅದಕ್ಕೂ ಅದೃಷ್ಟದ ಅವಶ್ಯಕತೆ ಇದೆ.
ದಿನ ಕಳೆದಂತೆ ಸೂಪರ್​-8 ಹಂತಕ್ಕೆ ಆಯ್ಕೆಯಾಗಿರುವ ತಂಡಗಳ ನಡುವಿನ ಪಂದ್ಯಗಳು ತೀವ್ರ ಕುತೂಹಲಕಾರಿ ಹಾಗೂ ರೋಚಕವಾಗಿ ಸಾಗುತ್ತಿವೆ. ಇಲ್ಲಿ ಯಾವ ತಂಡಗಳು ಸೆಮಿಫೈನಲ್‌ಗೆ ಹೋಗುತ್ತವೆ ಎಂಬ ಲೆಕ್ಕಾಚಾರಗಳು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡುತ್ತಿವೆ. ಗ್ರೂಪ್​ 2ನಿಂದ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮತ್ತೊಂದು ಸ್ಥಾನಕ್ಕಾಗಿ ಭಾರೀ ಜಿದ್ದಾಜಿದ್ದಿ ನಡೆಸುತ್ತಿವೆ.
ಪಾಕಿಸ್ತಾನ ಸೂಪರ್ 8ರಲ್ಲಿ ಎರಡು ಪಂದ್ಯಗಳನ್ನು ಆಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಳೆಯಿಂದ ಒಂದು ಅಂಕವನ್ನು ಸುಲಭವಾಗಿ ಗಿಟ್ಟಿಸಿಕೊಂಡಿತು. ಇನ್ನು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬೆನ್ನಲ್ಲೇ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ. ಆದಾಗ್ಯೂ, ಪಾಕ್​ ಸೆಮೀಸ್​ ಆಸೆ ಈಗ ಶ್ರೀಲಂಕಾದ ಮೇಲೆ ನಿಂತಿದೆ.
ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಸೆಮಿಫೈನಲ್ ತಲುಪುವ ಸಾಧ್ಯತೆ ಇರುವ ಮೂರು ತಂಡಗಳು. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವು ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಲೇಬೇಕು. ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್ ವಿರುದ್ಧ ಸೋತಿದೆ. ಅದೇ ಸಮಯದಲ್ಲಿ, ಫೆ.28ರಂದು ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ಎದುರು ಪಾಕಿಸ್ತಾನ ಗೆಲ್ಲಬೇಕು. ಹಾಗಿದ್ದರೆ ಮಾತ್ರ, ಪಾಕ್​ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿಯಲಿದೆ. ಇದು ಸೆಮಿಫೈನಲ್ ಆಸೆಯನ್ನು ಜೀವಂತವಾಗಿ ಉಳಿಸುತ್ತದೆ. ಅದೇ ಏನಾದರೂ ಸೋತರೆ, ಶ್ರೀಲಂಕಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಸೂಪರ್-8 ಗ್ರೂಪ್​ ಹಂತದ ಬಾಕಿ ಪಂದ್ಯಗಳಿವು

  • ಫೆ.25: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್
  • .27: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್
  • ಫೆ.28: ಶ್ರೀಲಂಕಾ ವಿರುದ್ಧ ಪಾಕಿಸ್ತಾನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net