ಇತ್ತ ಟೀಮ್ ಇಂಡಿಯಾ ಸೆಮೀಸ್ ಎಂಟ್ರಿಕೊಟ್ಟ ಖುಷಿಯಲ್ಲಿ, ಮುಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಅತ್ತ ಪಾಕಿಸ್ತಾನ ಆಟಗಾರರು, ಬೇಸರದ ಮುಖದಲ್ಲೇ ತಮ್ಮ ತವರಿಗೆ ವಾಪಾಸ್ ಆಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕ್ ತಂಡದ ಪ್ರತಿ ಆಟಗಾರನಿಗೆ ಪಿಸಿಬಿ 50 ಲಕ್ಷ ರೂ.ಗಳ ಭಾರೀ ದಂಡವನ್ನು ವಿಧಿಸಿದೆ. ಮತ್ತೊಂದೆಡೆ, ನಾಯಕನ ಸ್ಥಾನದಿಂದ ಸಲ್ಮಾನ್ ಅಲಿ ಅಘಾ ಅವರನ್ನು ವಜಾಗೊಳಿಸಲಿದೆ ಎಂಬ ಸುದ್ದಿಗಳು ವರದಿಯಾಗಿವೆ.