ಟ್ರೋಫಿ ಗೆಲ್ಲೋದು ಭಾರತದ ಡಿಎನ್​ಎ! ಅದೇ ನಮ್ಮವರು ಬರೀ... ತಮ್ಮದೇ ತಂಡಕ್ಕೆ ಪಾಕ್​ ಕ್ರಿಕೆಟಿಗ ಛೀಮಾರಿ

ಟೀಮ್ ಇಂಡಿಯಾ ಗೆಲುವು, ಪಾಕ್​ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ​
ಟೀಮ್ ಇಂಡಿಯಾ ಗೆಲುವು, ಪಾಕ್​ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ​
Published on

ಪ್ರಮುಖ ಮುಖ್ಯಾಂಶಗಳು

  • ಮಾ.08 ಟಿ20 ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾ
  • ಭಾರತ ತಂಡದ ಗೆಲುವು ಮುಂದಿಟ್ಟು ಪಾಕ್​ ಆಟಗಾರರಿಗೆ ಛೀಮಾರಿ
  • ಪಿಸಿಬಿಗೆ ಕ್ಲಾಸ್​ ತೆಗೆದುಕೊಂಡ ಪಾಕ್​ನ ಮಾಜಿ ಕ್ಯಾಪ್ಟನ್​
ನವದೆಹಲಿ: ಮಾ.08ರಂದು ಅಹಮದಾಬಾದ್​ ಕ್ರೀಡಾಂಗಣದಲ್ಲಿ ಕೋಟ್ಯಂತರ ಭಾರತೀಯರ ಆಸೆಯನ್ನು ಟೀಮ್​ ಇಂಡಿಯಾ ಈಡೇರಿಸಿತು. ಟಿ20 ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ 96 ರನ್​ಗಳಿಂದ ನ್ಯೂಜಿಲೆಂಡ್​ ತಂಡವನ್ನು ಬಗ್ಗುಬಡಿದು, ಮೂರನೇ ಬಾರಿ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಿತು. ಭಾರತದ ಗೆಲುವು ನೋಡಿ ಉರಿದು ಬೀಳುತ್ತಿರುವ ಪಾಕ್​ ಆಟಗಾರರ ಮಧ್ಯೆ ಓರ್ವ ಕ್ರಿಕೆಟಿಗ ಮಾತ್ರ, ಟೀಮ್ ಇಂಡಿಯಾ ಗೆಲುವನ್ನು ಮುಂದಿಟ್ಟು ತಮ್ಮದೇ ತಂಡಕ್ಕೆ ಛೀಮಾರಿ ಹಾಕಿದ್ದಾರೆ.
ಫೈನಲ್​ ಗೆದ್ದ ಬೆನ್ನಲ್ಲೇ ಸೂರ್ಯಕುಮಾರ್​ ಯಾದವ್​ ಪಡೆಗೆ ದೇಶ-ವಿದೇಶಗಳಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಭಾರತ ತಂಡಕ್ಕೆ ಎಲ್ಲಾ ಕ್ರಿಕೆಟ್​ ತಂಡಗಳಿಂದ ಹಾಗೂ ಕ್ರಿಕೆಟಿಗರಿಂದ ಶುಭಹಾರೈಕೆಗಳು ವ್ಯಕ್ತವಾಯಿತು. ಆದರೆ, ಪಾಕಿಸ್ತಾನ ಒಂದು ದೇಶ ಬಿಟ್ಟು. ಇದಕ್ಕೆ ಇಂತಹದ್ದೇ ಕಾರಣ ಎಂಬುದೇನಿಲ್ಲ. ಅದು ಎಲ್ಲರಿಗೂ ಗೊತ್ತೇ ಇದೆ. ವೈರಿ ರಾಷ್ಟ್ರದ ಮಾಜಿ ಕ್ರಿಕೆಟಿಗರು ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತ ಸೋಲಲಿ ಎಂದು ದೇವರ ಮೊರೆ ಹೋಗಿದ್ದರು. ಆದರೆ, ಭಗವಂತನ ಲೆಕ್ಕಾಚಾರವೇ ಬೇರೆ ಆಗಿದ್ದರಿಂದ, ನಾಲಿಗೆ ಹರಿಬಿಟ್ಟವರು ಅಂಡು ಸುಟ್ಟ ಬೆಂಕಿನಂತೆ ಆಡಿದ್ದು ಹಾಸ್ಯಸ್ಪದ.
ಟೀಮ್ ಇಂಡಿಯಾ ಆಡಿದ ರೀತಿಯನ್ನು ಉಲ್ಲೇಖಿಸಿ ಮಾತನಾಡಿದ ಪಾಕ್​ ತಂಡದ ಮಾಜಿ ಕ್ಯಾಪ್ಟನ್ ರಶೀದ್​ ಲತೀಫ್​, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡ ತೋರಿದ ಕಳಪೆ ಪ್ರದರ್ಶನ ಒಪ್ಪುವಂತದ್ದಲ್ಲ ಎಂದರು. 2022ರ ಟಿ20 ವಿಶ್ವಕಪ್​ನಿಂದ ಇಂದಿನವರಗೆ ತೀರ ಕಳಪೆಯಾಗಿ ಆಡುತ್ತಿರುವ ಪಾಕಿಸ್ತಾನ, ಒಳ್ಳೆಯ ಪ್ರದರ್ಶನ ನೀಡುವಂತ ಉತ್ತಮ ತಂಡವನ್ನು ಆಯ್ಕೆ ಮಾಡುವಲ್ಲಿ ಪಿಸಿಬಿ ಕೂಡ ಮುಗ್ಗರಿಸಿದೆ ಎಂದು ಬೆಟ್ಟು ಮಾಡಿ ದೂರಿದ್ದಾರೆ.
ಗೆಲ್ಲುವುದು, ಟ್ರೋಫಿಗಳನ್ನು ಎತ್ತಿಹಿಡಿಯುವುದು ಭಾರತದ ಡಿಎನ್​ಎ ಆದರೆ, ನಮ್ಮವರು ಬರೀ ಸೋಲುವುದೇ ಆಗಿದೆ. ಇಲ್ಲಿ ನಿಜಕ್ಕೂ ನಾನು ಟೀಮ್ ಇಂಡಿಯಾದ ಒಟ್ಟಾರೆ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಟಾಸ್​ ಸೋತರು ಕೂಡ 250 ರನ್​ಗಳ ಬೃಹತ್ ಗುರಿ ದಾಖಲಿಸಿದರು. ಅವರನ್ನು ಯಾರಿಂದಲೂ ಬೆನ್ನತ್ತಲು ಸಾಧ್ಯವಾಗಲಿಲ್ಲ. ಒಂದೇ ರಾತ್ರಿಯಲ್ಲಿ ಇದನ್ನೆಲ್ಲ ಮಾಡಲಿಲ್ಲ ಭಾರತ. ಕಳೆದ 10 ವರ್ಷಗಳ ಪರಿಶ್ರಮವೇ ಈ ಫಲ ನೀಡಿರುವುದು ಎಂದರು.
ನಾಕೌಟ್​ ಹಂತಗಳಲ್ಲೇ ಮುಗ್ಗರಿಸುವ ಖಯಾಲಿ ನಮ್ಮ ತಂಡದ್ದು. ಪ್ರತಿ ಬಾರಿ ಸೋತು ಮನೆಗೆ ಬರುವುದು ಅಭ್ಯಾಸವಾಗಿ ಬಿಟ್ಟಿದೆ. ಪಿಸಿಬಿ ಒಂದು ದೊಡ್ಡ ನಾಲಾಯಕ್​ ಕ್ರಿಕೆಟ್​ ಮಂಡಳಿ. ಆಟಗಾರರ ಒಪ್ಪಂದಗಳನ್ನು ಹೇಗೆ ನಡೆಸಿಕೊಳ್ಳಬೇಕು ಗೊತ್ತಿಲ್ಲ. ಒಂದು ಕಾಂಟ್ಯ್ರಾಕ್ಟ್​ ಎಂದಮೇಲೆ, ಅಲ್ಲಿ ದಂಡ ಮತ್ತು ಬಹುಮಾನ ಎರಡೂ ಉಲ್ಲೇಖ ಆಗಿರುತ್ತದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net