ಇದನ್ನು ನೋಡ್ತಿದ್ದಂತೆ ಕೆರಳಿದ ಪಾಕಿಸ್ತಾನಿ ಅಭಿಮಾನಿಗಳು, ಇದೀಗ ತಂಡದ ಕ್ಯಾಪ್ಟನ್ ಮತ್ತು ಅವರ ಪತ್ನಿ, ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ತಮಗೆ ಮತ್ತು ತಮ್ಮ ಮಗನಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಸಬ್ಬಾ ಮಾಂಝರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಮ್ಮನ್ನು ಹೀಗೆಲ್ಲ ನಿಂದಿಸಿ, ಅಪಮಾನಿಸಿದ ಕೂಡಲೇ ಪಾಕಿಸ್ತಾನ ಏನು ಟಿ20 ವಿಶ್ವಕಪ್ ಗೆಲ್ಲುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಸಲಿಗೆ, ಇದು ಪಾಕ್ ಕ್ರಿಕೆಟ್ ಪ್ರೇಮಿಗಳ ಹುಚ್ಚಾಟ, ತಳಮಟ್ಟದ ಬುದ್ಧಿಯನ್ನು ಮತ್ತೆ ಎತ್ತಿಹಿಡಿದಿದೆ. ಈ ಸುದ್ದಿ ವೈರಲ್ ಆಗ್ತಿದ್ದಂತೆ ಇದೀಗ ತಮ್ಮ ಸ್ಟೋರಿಯನ್ನು ಸಲ್ಮಾನ್ ಪತ್ನಿ ಡಿಲೀಟ್ ಮಾಡಿದ್ದಾರೆ.