ಸಾಮಾನ್ಯವಾಗಿ ಯಾರಿಗೆ ಆಗಲಿ, 15 ವರ್ಷದ ಹುಡುಗನೊಬ್ಬ ಮೈದಾನದ ತುಂಬೆಲ್ಲ ಸಿಕ್ಸರ್ಗಳನ್ನು ಹೊಡೆಯುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಕ್ರಿಕೆಟ್ ದಿಗ್ಗಜರಿಗೆ ನಂಬಲು ಅಸಾಧ್ಯವಾಗಿದೆ. ಹೀಗಿರುವಾಗ, ಸಾಮಾನ್ಯ ಜನರು ಗೊಂದಲಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವೇನಿಲ್ಲ.