ಅದೊಂದೇ ನಮ್ಮ ಸೋಲಿಗೆ ಕಾರಣ... ಭಾರತ ಎದುರು ಮಂಡಿಯೂರಿದ ಬೆನ್ನಲ್ಲೇ ಪಾಕ್​ ಕ್ಯಾಪ್ಟನ್​ ಅಚ್ಚರಿ ಹೇಳಿಕೆ | IND vs PAK

ಸಲ್ಮಾನ್ ಅಲಿ ಅಘಾ
ಸಲ್ಮಾನ್ ಅಲಿ ಅಘಾ
Published on

ಪ್ರಮುಖ ಮುಖ್ಯಾಂಶಗಳು

  • ಹೈವೋಲ್ಟೇಜ್​ ಪಂದ್ಯದಲ್ಲಿ ಹೀನಾಯ ಸೋಲುಂಡ ಪಾಕಿಸ್ತಾನ
  • ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರೀ ಮುಖಭಂಗ ಅನುಭವಿಸಿದ ಪಾಕ್​
  • ಇದೇ ಕಾರಣಕ್ಕೆ ನಮ್ಮ ತಂಡ ಸೋಲುಂಡಿತು ಎಂದ ಕ್ಯಾಪ್ಟನ್​
ಶ್ರೀಲಂಕಾ: ನಿನ್ನೆ (ಫೆ.15) ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮತ್ತೆ ಪಾಕ್​ ತಂಡಕ್ಕೆ ಹೀನಾಯ ಸೋಲಿನ ರುಚಿಯನ್ನು ಉಣಿಸಿತು. ಅತ್ತ ತಮ್ಮ ಟೀಮ್​ ಸೋಲುತ್ತಿದ್ದಂತೆ ಸ್ಟೇಡಿಯಂ ಬಿಟ್ಟು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪರಾರಿಯಾದರೆ, ಇತ್ತ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಸೋತಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.
ಪವರ್ ಪ್ಲೇನಲ್ಲಿ ಉತ್ತಮ ಇನ್ನಿಂಗ್ಸ್​ ಬರಲಿಲ್ಲ. ಬ್ಯಾಕ್​ ಟು ಬ್ಯಾಕ್​ ವಿಕೆಟ್ ಕಳೆದುಕೊಂಡಿದ್ದು ದೊಡ್ಡ ಹೊಡೆತ ನೀಡಿತು. ಕಳೆದ ಆರು ತಿಂಗಳಿನಿಂದ ನಮ್ಮ ಸ್ಪಿನ್ನರ್‌ಗಳು ಅದ್ಭುತವಾಗಿಯೇ ಬೌಲಿಂಗ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ, ಅವರ ಮೇಲೆ ನಂಬಿಕೆ ಹೆಚ್ಚಿರುತ್ತೆ. ಆದ್ರೆ, ಭಾರತದ ವಿರುದ್ಧದ ಪಂದ್ಯದಲ್ಲಿ ಇದು ಫಲಿಸಲಿಲ್ಲ. ಪರಿಸ್ಥಿತಿಗಳಿಗೆ ಅನುಗುಣವಾಗಿ ಬೌಲಿಂಗ್ ಮಾಡಲು ನಮ್ಮ ಬೌಲರ್‌ಗಳು ವಿಫಲರಾದರು ಎಂದರು.
ನಮ್ಮ ಪ್ಲ್ಯಾನ್​ ಪ್ರಕಾರ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇನ್ನು ತಂಡದ ಬ್ಯಾಟಿಂಗ್ ಪ್ರದರ್ಶನ ತುಂಬ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ ಮೂರು ಅಥವಾ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡರೆ, ಒತ್ತಡದಲ್ಲಿಯೇ ಪಂದ್ಯವನ್ನು ಆಡಬೇಕಾಗುತ್ತದೆ. ನಮಗೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿಯೇ, ಭಾರತ ನೀಡಿದ ಗುರಿಯನ್ನು ಬೆನ್ನತ್ತುವಲ್ಲಿ ನಾವು ಎಡವಿದೆವು. ಇದೇ ಕಾರಣಕ್ಕೆ ನಮ್ಮ ತಂಡ ಸೋತಿತು ಎಂದು ಬೇಸರ ಹೊರಹಾಕಿದರು.
ಮುಂದಿನ ಎರಡು ದಿನಗಳಲ್ಲಿ ಮತ್ತೊಂದು ಪಂದ್ಯವಿದೆ. ನಾವು ಈ ಸೋಲಿನಿಂದ ಶೀಘ್ರವೇ ಹೊರಬರಬೇಕು ಮತ್ತು ಮತ್ತೆ ಗಮನಹರಿಸಬೇಕು. ಮುಂದಿನ ಪಂದ್ಯವನ್ನು ಗೆದ್ದರೆ, ನಾವು ಸೂಪರ್ ಫೋರ್‌ಗೆ ಅರ್ಹತೆ ಪಡೆಯುತ್ತೇವೆ. ಅಲ್ಲಿಂದ, ನಾವೀದನ್ನು ಹೊಸ ಟೂರ್ನಿ ಎಂಬಂತೆ ಭಾವಿಸಿ ಮುಂದುವರಿಯಬೇಕು ಎಂದು ಸಲ್ಮಾನ್ ಆಘಾ ಹೇಳಿದ್ದಾರೆ.

ಪಂದ್ಯದ ವಿವರ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 175 ರನ್​ ಕಲೆಹಾಕಿತು. 176 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕ ಹಂತದಲ್ಲೇ ಶಾಕ್​ ಎದುರಾಯಿತು. ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡ ಪಾಕ್​, ಆ ಬಳಿಕ ಸರಣಿ ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಪೈಪೋಟಿ ನೀಡುವಲ್ಲಿ ಮುಗ್ಗರಿಸಿತು. 61 ರನ್​ಗಳಿಂದ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದ್ದು ಅದ್ಭುತ. ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 77 ರನ್ ಸಿಡಿಸಿದ ಇಶಾನ್ ಕಿಶನ್​, ತಂಡದ ಪರ ಸ್ಫೋಟಕ ಇನ್ನಿಂಗ್ಸ್ ನೀಡಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net