ಶೆಫಾಲಿಗೆ ಆಕ್ರಮಣಕಾರಿ ಸೆಂಡ್​ಆಫ್​ ನೀಡಿದ್ದ ಪಾಕ್​ ನಾಯಕಿ ಫಾತಿಮಾ ಸನಾಗೆ ಶೇ.10 ದಂಡ!

ಶೆಫಾಲಿಗೆ ಆಕ್ರಮಣಕಾರಿ ಸೆಂಡ್​ಆಫ್​ ನೀಡಿದ್ದ ಪಾಕ್​ ನಾಯಕಿ ಫಾತಿಮಾ ಸನಾಗೆ ಶೇ.10 ದಂಡ!
ಶೆಫಾಲಿಗೆ ಆಕ್ರಮಣಕಾರಿ ಸೆಂಡ್​ಆಫ್​ ನೀಡಿದ್ದ ಪಾಕ್​ ನಾಯಕಿ ಫಾತಿಮಾ ಸನಾಗೆ ಶೇ.10 ದಂಡ!
Published on
ದುಬೈ: ಮಹಿಳಾ ಟಿ20 ಏಷ್ಯಾಕಪ್ (Women''s Asia Cup)​ ಪಂದ್ಯದ ವೇಳೆ ಭಾರತ ತಂಡದ ಆರಂಭಿಕ ಬ್ಯಾಟುಗಾರ್ತಿ ಶೆಫಾಲಿ ವರ್ಮ ಅವರನ್ನು ಔಟ್​ ಮಾಡಿದ ಬಳಿಕ ಡಗೌಟ್​ಗೆ ಮರಳುವಂತೆ ಸನ್ನೆ ಮಾಡಿ ಆಕ್ರಮಣಕಾರಿಯಾಗಿ ಸೆಂಡ್​​ ಆಫ್​ ನೀಡಿದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾಗೆ ಐಸಿಸಿ ನೀತಿಸಂಹಿತೆಯ ಅನ್ವಯ ಪಂದ್ಯ ಸಂಭಾವನೆಯ ಶೇ. 10 ದಂಡ ಶಿಕ್ಷೆ ವಿಧಿಸಲಾಗಿದೆ.

ಕಳೆದ ಶನಿವಾರ ನಡೆದ ಪಂದ್ಯದಲ್ಲಿ ಭಾರತೀಯ ಇನಿಂಗ್ಸ್​ನ 2ನೇ ಓವರ್​ ವೇಳೆ ಈ ಘಟನೆ ನಡೆದಿತ್ತು. ಫಾತಿಮಾ ಸನಾಗೆ ಒಂದು ಡಿಮೆರಿಟ್​ ಅಂಕವನ್ನೂ ನೀಡಲಾಗಿದೆ.

ಪಾಕಿಸ್ತಾನ ಕೇವಲ 55 ರನ್​ಗಳಿಗೆ ಆಲೌಟ್​ ಆಗಿದ್ದ ನಡುವೆಯೂ ಫಾತಿಮಾ ಈ ರೀತಿ ಅಹಂಕಾರದಿಂದ ವರ್ತಿಸಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net