ಸೂಪರ್​ 8 ಹಂತದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ! ಪಾಕ್​-ನ್ಯೂಜಿಲೆಂಡ್​​ ಮ್ಯಾಚ್​ ನಾಳೆಗೆ? ಹೀಗಿದೆ ವರದಿ | PAK vs NZ

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ನಡುವಿನ ಸೂಪರ್ 8 ಪಂದ್ಯ
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ನಡುವಿನ ಸೂಪರ್ 8 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಟಿ20 ವಿಶ್ವಕಪ್​ ಸೂಪರ್​ 8 ಹಂತದ ಪಂದ್ಯಗಳು
  • ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ
  • ಮಳೆ ಆರ್ಭಟಕ್ಕೆ ಪಂದ್ಯ ನಡೆಯದಿದ್ದರೆ ನಾಳೆಗೆ ಮುಂದೂಡಿಕೆ?
PAK vs NZ: ಇಂದು (ಫೆ.21) ಕೊಲೊಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್​ 8 ಹಂತದ ಪಂದ್ಯಕ್ಕೆ ಇದೀಗ ವರುಣನ ಅಡಚಣೆ ಎದುರಾಗಿದೆ.
ಸೂಪರ್​ 8 ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಟಾಸ್​ ಆಗಿದ್ದು, ಪಾಕ್​ ಕ್ಯಾಪ್ಟನ್​ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಮೊದಲ ಓವರ್​ಗೂ ಮುನ್ನವೇ ಮಳೆ ಶುರುವಾಗಿ, ಪಂದ್ಯ ಆರಂಭಕ್ಕೆ ಅಡಚಣೆ ಉಂಟುಮಾಡಿದೆ. ಇನ್ನೂ ಮಳೆರಾಯನ ಆರ್ಭಟ ನಿಲ್ಲದೆ ಇರುವುದು ಸದ್ಯ ಪಂದ್ಯ ನಡೆಯುವುದೇ ಡೌಟ್​ ಎಂದು ಹೇಳಲಾಗಿದೆ.

ಹವಾಮಾನ ವರದಿ ಏನು?

ಹವಾಮಾನ ಮುನ್ಸೂಚನೆಗಳ ಪ್ರಕಾರ, ಮುಂದಿನ ಕೆಲವು ಗಂಟೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಗಳು ಶೇ.20ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಮಳೆ ಏನಾದರೂ ಬಿಡದೆ ಸುರಿದರೆ ಪಂದ್ಯ ರದ್ದಾಗುವ ಸಾಧ್ಯತೆಗಳಿವೆ. ತಂಡಗಳು ಕನಿಷ್ಠ 5 ಓವರ್​ ಆದರೂ ಆಡಬೇಕಿದೆ. ಅದೇನಾದರೂ ಸಾಧ್ಯವಾಗಲಿಲ್ಲ ಎಂದರೆ, ಮ್ಯಾಚ್​ ರದ್ದಾಗಲಿದೆ.

ಪಂದ್ಯ ವಾಶ್​ಔಟ್ ಆದ್ರೆ ನಾಳೆಗೆ?

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದ ಯಾವುದಾದರೂ ಪಂದ್ಯ ರದ್ದಾಗುವ ಮೊದಲು ಕನಿಷ್ಠ ಐದು ಓವರ್​ಗಳನ್ನು ಆಡುವುದು ಅನಿವಾರ್ಯ. ಇದು ಐಸಿಸಿಯ ಮೂಲ ನಿಯಮ. ವರುಣನ ಆರ್ಭಟದ ನಡುವೆ ಈ 5 ಓವರ್​ ಕೂಡ ಆಡಿಸಲು ಸಾಧ್ಯವಾಗಿಲ್ಲ ಎಂದಾದರೆ, ಆ ಪಂದ್ಯ ರದ್ದಾಗುತ್ತೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇಲ್ಲಿ 'ರಿಸರ್ವ್​ ಡೇ'ಗೆ (ಪಂದ್ಯ ನಾಳೆಗೆ ಮುಂದೂಡಿಕೆ) ಅನುಮತಿ ಇಲ್ಲ,(ಏಜೆನ್ಸೀಸ್).​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net