ಅವತ್ತು ಕೈಮುಗಿದು ಕೇಳಿಕೊಂಡಂತೆ ಇಂದು ಆಗಲ್ಲ! ಇಲ್ಲಿಯೂ ಅದೃಷ್ಟ ಖುಲಾಯಿಸದಿದ್ರೆ ಭಾರೀ ಮುಖಭಂಗ ಖಚಿತ | PAK vs ENG

ಇಂಗ್ಲೆಂಡ್​ vs ಪಾಕಿಸ್ತಾನ ಸೂಪರ್​-8 ಪಂದ್ಯ
ಇಂಗ್ಲೆಂಡ್​ vs ಪಾಕಿಸ್ತಾನ ಸೂಪರ್​-8 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಕುತೂಹಲಕಾರಿ ಪಂದ್ಯ
  • ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ 4ನೇ ಸೂಪರ್-8 ಪಂದ್ಯ​
  • ಅಂದು ಖುಲಾಯಿಸಿದ ಅದೃಷ್ಟ ಇಂದು ನಡೆಯಲ್ಲ
  • ಇದು ಪಾಕ್​ಗೆ ಮಾಡು ಇಲ್ಲವೇ ಮಡಿ
PAK vs ENG: ಟಿ20 ವಿಶ್ವಕಪ್ ಟೂರ್ನಿಯ ಸೂಪರ್​-8 ಪಂದ್ಯಗಳು ಸಹ ರೋಚಕವಾಗಿ ಸಾಗುತ್ತಿದ್ದು, ನಿನ್ನೆಯ (ಫೆ.23) ವೆಸ್ಟ್​ ಇಂಡೀಸ್​ ಮತ್ತು ಜಿಂಬಾಬ್ವೆ ಪಂದ್ಯದಲ್ಲಿ ವಿಂಡೀಸ್​ ಭಾರೀ ಅಂತರದ ಗೆಲುವು ಸಾಧಿಸಿತು. ಈ ಮೂಲಕ ಸೆಮೀಸ್​ಗೆ ಹೋಗುವ ಎಲ್ಲ ಭರವಸೆಯನ್ನು ಖಚಿತಪಡಿಸಿದೆ. ಇದು ವೆಸ್ಟ್​ ಇಂಡೀಸ್​ಗೆ ಬಲ ತುಂಬಿದರೆ, ಉಳಿದ ತಂಡಗಳಿಗೆ ಸೆಮಿಫೈನಲ್​ ಕನಸು ದೂರ ಎನ್ನುವಂತೆ ಮಾಡಿದೆ. ಈ ಸಾಲಿನಲ್ಲಿ ಭಾರತ ಕೂಡ ಇದೆ.
ಇಂದು (ಫೆ.24) ಶ್ರೀಲಂಕಾದ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಸೂಪರ್-8 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವೆ ನಡೆಯಲಿದೆ. ಈ ಎರಡು ಟೀಮ್​ಗಳ ಪೈಕಿ ಯಾರು ಇವತ್ತಿನ ಪಂದ್ಯ ಗೆದ್ದು, ಸೆಮಿಫೈನಲ್ ತಲುಪುತ್ತಾರೆ ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಮೂಡಿದೆ. ನ್ಯೂಜಿಲೆಂಡ್​ ವಿರುದ್ಧದ ಮೊದಲ ಸೂಪರ್-8 ಪಂದ್ಯದಲ್ಲಿ ಮಳೆ ಸುರಿದ ಪರಿಣಾಮ ಎರಡೂ ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು. ಇದರಿಂದ ಒಂದು ಅಂಕ ಉಚಿತವಾಗಿ ಗಿಟ್ಟಿಸಿಕೊಂಡ ಪಾಕ್​, ಇಂದಿನ ಪಂದ್ಯಕ್ಕೂ ಮಳೆ ಬಂದರೆ ಸಾಕಪ್ಪ ಎಂದು ಮನಸೊಳಗೆ ಬೇಡಿಕೊಳ್ಳುತ್ತಿದೆ. ಆದರೆ, ಅದು ಈಡೇರುವುದಿಲ್ಲ.   
ಪಾಕಿಸ್ತಾನ ಇಂದು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದ್ದು, ಈ ಪಂದ್ಯ ಗೆದ್ದರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿರಲಿದೆ. ಇಲ್ಲದಿದ್ದರೆ, ಸೆಮೀಸ್​ ಸಾಧ್ಯತೆಗಳು ಬಹುತೇಕ ಡೌಟ್​ ಆಗಲಿದೆ. ಇಂದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಗೆದ್ದು ಬೀಗುವುದು ಮಾತ್ರವಲ್ಲದೇ, ಉತ್ತಮ ರನ್​ರೇಟ್​ನಿಂದ ಗೆಲುವು ಸಾಧಿಸಿದರೆ ಮಾತ್ರ ಪಾಕ್​ಗೆ ಸೆಮೀಸ್​ ಕನಸು ಭಗ್ನವಾಗುವುದಿಲ್ಲ. ಅದೇ ಇಲ್ಲಿಯೂ ಮಳೆ ಬರಲಿ ಎಂದು ತಪ್ಪಿಸಿಕೊಳ್ಳುವ ನಾಟಕ ಮಾಡಿದ್ರೆ ಖಂಡಿತ ಭಾರೀ ಮುಖಭಂಗಕ್ಕೆ ಸಾಕ್ಷಿಯಾಗೋದು ಖಚಿತ. 
ಇಂಗ್ಲೆಂಡ್ ಮತ್ತು ಪಾಕಿಸ್ತಾನ ಇದುವರೆಗೆ 30 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಆಂಗ್ಲರ ಪಡೆ 21 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಕೇವಲ ಒಂಬತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳ ನಡುವಿನ ಕೊನೆಯ ಮೂರು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ. ಆದಾಗ್ಯೂ, ಇಂದಿನ ಮ್ಯಾಚ್​ನಲ್ಲಿ ಆಂಗ್ಲರ ಪಡೆಯನ್ನು ಮಣಿಸಲು ಪಾಕಿಸ್ತಾನ ಏನೆಲ್ಲ ಮಾಸ್ಟರ್​ಪ್ಲ್ಯಾನ್ ಮಾಡಲಿದೆ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತೀವ್ರ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net