ಫಿಲ್ ಸಾಲ್ಟ್, ಜಾಸ್ ಬಟ್ಲರ್, ಜಾಕೆಬ್ ಬೆಥಲ್ ಸೇರಿದಂತೆ ಸ್ಟಾರ್ ಬ್ಯಾಟರ್ಗಳು ಬಹುಬೇಗನೇ ವಿಕೆಟ್ ಕಳೆದುಕೊಂಡರು. ಇಂತಹ ಕಠಿಣ ಸಮಯದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಕೇವಲ 51 ಎಸೆತಗಳಲ್ಲಿ 100 ರನ್ ಬಾರಿಸಿದರು. ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ಪಾಕ್ ಬೌಲರ್ಗಳ ಬೆವರಿಳಿಸಿದರು. ಇಷ್ಟೇ ಅಲ್ಲದೆ, ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ. ಶತಕದಾಟ ತೋರುವ ಮೂಲಕ ನಾಯಕನ ಇನ್ನಿಂಗ್ಸ್ ನೀಡಿದ್ದು ವಿಶೇಷ.