ಪಂದ್ಯ ಬಹಿಷ್ಕರಿಸುವ ನಾಟಕಕ್ಕೆ ಛೀಮಾರಿ ಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, "ಇಂತಹ ನಿರ್ಧಾರಗಳಿಂದ ಜನರು, ಟೀಮ್ ಇಂಡಿಯಾ ವಿರುದ್ಧ ಆಡಲು ನಮ್ಮವರಿಗೆ ಹೆದರಿಕೆ. ಹೀಗಾಗಿಯೇ, ಪಂದ್ಯವನ್ನು ಬಹಿಷ್ಕರಿಸಿದ್ದಾರೆ ಎಂದು ಲೇವಡಿ ಮಾಡ್ತಾರೆ. ಅಸಲಿಗೆ, ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಪಾಕ್ ಪ್ರಕಾರ, ಅವರಿನ್ನೂ ಬಾಂಗ್ಲಾ ಪರ ನಿಂತ ಹಾಗೇ ಕಾಣಿಸುತ್ತಿದೆ. ಆದರೆ, ಬಾಂಗ್ಲಾದೇಶ ತಂಡ ಟೂರ್ನಿಯಿಂದ ಹೊರಬಿದ್ದು ಯಾವುದೋ ಕಾಲವಾಯಿತು" ಎಂದಿದ್ದಾರೆ.