ಮೊದಲ ಇನ್ನಿಂಗ್ಸ್‌ನಲ್ಲಿ 412 ರನ್‌ಗಳ ಭಾರಿ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ನಲ್ಲಿ ಫಾಲೋ-ಆನ್ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ, ಆರಂಭದಲ್ಲಿ ಕೊಂಚ ಉತ್ತಮ ಹೋರಾಟದ ಮನೋಭಾವ ಪ್ರದರ್ಶಿಸಿತು. ಆರಂಭಿಕ ಆಟಗಾರರಾದ ಅಬ್ದುಲ್ ಮಲಿಕ್ ಮತ್ತು ಸೆದಿಕುಲ್ಲಾ ಅಟಲ್ ಮೊದಲ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವಾಡಿದರು, ಇದು ಟೆಸ್ಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ತಾನದ ಅತ್ಯುತ್ತಮ ಆರಂಭಿಕ ಜೊತೆಯಾಟವಾಗಿದೆ. ಅದರಲ್ಲೂ ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ದಿಟ್ಟವಾಗಿ ಕೌಂಟರ್ ಅಟ್ಯಾಕ್ ಮಾಡಿದ ಅಟಲ್, ಪಂದ್ಯವನ್ನು ಮತ್ತಷ್ಟು ದೂರ ಕೊಂಡೊಯ್ಯುವ ಛಲ ತೋರಿದರು.