

ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಸಂಯುಕ್ತ ಆತಿಥ್ಯದಲ್ಲಿ ನಿಗದಿಯಾಗಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 2ರಂದು ಚಾಲನೆ ಸಿಗುವ ಸಾಧ್ಯತೆಗಳಿವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಜಾಗತಿಕ ಕ್ರಿಕೆಟ್ ಟೂರ್ನಿಯ ಆರಂಭಿಕ ದಿನಾಂಕವನ್ನು ಐಸಿಸಿ ಇನ್ನು ಅಧಿಕೃತಪಡಿಸಿಲ್ಲ. ಆದರೆ, ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುವ ಸಲುವಾಗಿ, ಅವರ ಜನ್ಮದಿನದಂದೇ (ಗಾಂಧಿ ಜಯಂತಿ) ಟೂರ್ನಿಯನ್ನು ಆರಂಭಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿ ಸ್ವರೂಪದಲ್ಲಿ ಐಸಿಸಿ ಬದಲಾವಣೆ ನಡೆಸಿದ್ದು, ಒಟ್ಟು 14 ತಂಡಗಳು 50 ದಿನ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ದಕ್ಷಿಣ ಆಫ್ರಿಕಾದ ಎಂಟು, ಜಿಂಬಾಬ್ವೆಯ ಮೂರು ಮತ್ತು ನಮೀಬಿಯಾದ ರಾಜಧಾನಿ ವಿಂಡ್‌ಹೋಕ್ ಸೇರಿ ಒಟ್ಟು 12 ತಾಣಗಳು ಪಂದ್ಯಗಳಿಗೆ ಆತಿಥ್ಯವಹಿಸಲಿವೆ.