ದಾಖಲೆ ಬರೆದ ಅಭಿಷೇಕ್​ ಬ್ಯಾಟ್​ ಚೆಕ್​ ಮಾಡಿದ ಕಿವೀಸ್ ಆಟಗಾರರು! ಕೇಳಿದ್ದು ಮಾತ್ರ ಒಂದೇ ಪ್ರಶ್ನೆ... | Abhishek Sharma

ಅಭಿಷೇಕ್ ಶರ್ಮ ಬ್ಯಾಟ್​ ಚೆಕ್ ಮಾಡಿದ ಕಿವೀಸ್ ಆಟಗಾರರು
ಅಭಿಷೇಕ್ ಶರ್ಮ ಬ್ಯಾಟ್​ ಚೆಕ್ ಮಾಡಿದ ಕಿವೀಸ್ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವೀರೋಚಿತ ಪ್ರದರ್ಶನ
  • ಕಿವೀಸ್ ಬೌಲರ್‌ಗಳನ್ನು ಕಾಡಿದ ಟೀಮ್ ಇಂಡಿಯಾ ಬ್ಯಾಟರ್​​ಗಳು
  • ಸ್ಫೋಟಕ ಇನ್ನಿಂಗ್ಸ್ ಆಡಿದ ಅಭಿಷೇಕ್ ಅವರ ಬ್ಯಾಟ್ ಚೆಕ್ ಮಾಡಿದ ಕಿವೀಸ್​ ಪಡೆ
Abhishek Sharma: ನಿನ್ನೆ (ಜ.25) ಗುವಾಹಟಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದರು. ಕೇವಲ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿದ ಅವರು, 68 ರನ್ ಗಳಿಸಿ ಅಜೇಯರಾಗಿ ಪಂದ್ಯದಲ್ಲಿ ಉಳಿದದ್ದು ಸದ್ಯ ಕ್ರಿಕೆಟ್​ ಪ್ರಿಯರ ಪ್ರಶಂಸೆ, ಮೆಚ್ಚುಗೆಗೆ ಕಾರಣವಾಗಿದೆ.
ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್, ಕೇವಲ 14 ಎಸೆತಗಳಲ್ಲಿ ವೇಗದ ಅರ್ಧಶತಕ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಅಭಿಷೇಕ್​ ಅವರ ಸ್ಫೋಟಕ ಇನ್ನಿಂಗ್ಸ್ ಅನ್ನು ಕೊಂಡಾಡುತ್ತಿರುವ ಮಾಜಿ ಕ್ರಿಕೆಟಿಗರು, ಯುವ ಬ್ಯಾಟರ್​ನ ಗುರುಗಳಾದ ಯುವರಾಜ್ ಸಿಂಗ್​ರನ್ನು ಈ ಸಮಯದಲ್ಲಿ ನೆನಪಿಸಿಕೊಂಡಿದ್ದು ವಿಶೇಷ.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮ ಅವರ ಬಿರುಗಾಳಿಯ ಇನ್ನಿಂಗ್ಸ್, ನ್ಯೂಜಿಲೆಂಡ್ ನೀಡಿದ 154 ರನ್​ಗಳ ಗುರಿಯನ್ನು ಕೇವಲ 10 ಓವರ್‌ಗಳಲ್ಲಿ ತಲುಪುವಂತೆ ಮಾಡಿತು. ಈ ಪಂದ್ಯ ಗೆಲ್ಲುವ ಮೂಲಕ ಭಾರತ 3-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಕಿವೀಸ್​ ಅನ್ನು ಸರಣಿಯಲ್ಲಿ ಕ್ವೀನ್​ಸ್ವೀಪ್​ ಮಾಡಲು ಎದುರುನೋಡುತ್ತಿದೆ.

ಅಭಿಷೇಕ್​ ಬ್ಯಾಟ್​ ಚೆಕ್​ ಮಾಡಿದ ಕಿವೀಸ್​

ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ಬಳಿ ಬಂದ ಕಿವೀಸ್​ ಆಟಗಾರರು, ಅವರ ಕೈಯಲ್ಲಿದ್ದ ಬ್ಯಾಟ್ ಅನ್ನು ಹಿಂದೆ-ಮುಂದೆ ತಿರುಗಿಸುವ ಮೂಲಕ ಚೆಕ್ ಮಾಡಿದರು. ನೀವು ಬ್ಯಾಟ್‌ನಲ್ಲಿ ಏನಾಕಿದ್ದೀರಿ? ಹೇಗೆ ಇಂತಹ ಶಾಟ್ಸ್​ಗಳನ್ನು ಹೊಡೆಯುತ್ತಿದ್ದೀರಿ? ಎಂದು ಕೇಳಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net