ಖಾತೆ ತೆರೆದಾಗ ಖುಷಿ, ಶತಕ ಸಿಡಿಸಿದಾಗ ಸಂಭ್ರಮವಿಲ್ಲ! ಕಾರಣ ತಿಳಿಸಿದ ವಿರಾಟ್​ ಕೊಹ್ಲಿ

ಖಾತೆ ತೆರೆದಾಗ ಖುಷಿ, ಶತಕ ಸಿಡಿಸಿದಾಗ ಸಂಭ್ರಮವಿಲ್ಲ! ಕಾರಣ ತಿಳಿಸಿದ ವಿರಾಟ್​ ಕೊಹ್ಲಿ
ಖಾತೆ ತೆರೆದಾಗ ಖುಷಿ, ಶತಕ ಸಿಡಿಸಿದಾಗ ಸಂಭ್ರಮವಿಲ್ಲ! ಕಾರಣ ತಿಳಿಸಿದ ವಿರಾಟ್​ ಕೊಹ್ಲಿ
Published on
ರಾಯ್ಪುರ: ಐಪಿಎಲ್​ನಲ್ಲಿ 9ನೇ ಶತಕ ಸಿಡಿಸುವ ಮೂಲಕ ತನ್ನದೇ ಹೆಸರಿನಲ್ಲಿರುವ ದಾಖಲೆಯನ್ನು ವಿಸ್ತರಿಸಿಕೊಂಡಿರುವ ವಿರಾಟ್​ ಕೊಹ್ಲಿ (Virat Kohli), ಕೆಕೆಆರ್​ ಎದುರಿನ ಪಂದ್ಯದಲ್ಲಿ ಮೊದಲ ರನ್​ ಗಳಿಸಿದಾಗಲೇ ಗಾಳಿಯಲ್ಲಿ ಕೈಯಿಂದ ಗುದ್ದಿ ಸಂಭ್ರಮಿಸಿದ್ದರು. ಆದರೆ ಶತಕ ಪೂರೈಸಿದ ಬಳಿಕ ಅವರು ಸಂಭ್ರಮಿಸಿರಲಿಲ್ಲ!

ಸತತ 2 ಸೊನ್ನೆ ಸುತ್ತಿದ ಬಳಿಕ ಕೊನೆಗೂ ಖಾತೆ ತೆರೆದ ನಿರಾಳತೆಯೇ ಇದಕ್ಕೆ ಕಾರಣ ಎಂದವರು ಹೇಳಿದ್ದಾರೆ. "ಕಳೆದ 2 ಪಂದ್ಯಗಳಲ್ಲಿ ನಾನು ರನ್​ ಗಳಿಸಿರಲಿಲ್ಲ. ನಾನು ಉತ್ತಮವಾಗಿ ಆಡುತ್ತಿದ್ದ ನಡುವೆ ಹೀಗಾದಾಗ ಅದು ಕಾಡುತ್ತದೆ. ಹೀಗಾಗಿ ಸತತ 2 ಶೂನ್ಯದ ಬಳಿಕ ಸ್ವಲ್ಪ ನರ್ವಸ್​ ಆಗಿದ್ದೆ' ಎಂದು 37 ವರ್ಷದ ಕೊಹ್ಲಿ ಮೊದಲ ರನ್​ ಗಳಿಸಿದಾಗ ಸಂಭ್ರಮಿಸಿದ್ದಕ್ಕೆ ಕಾರಣ ವಿವರಿಸಿದರು.

ಜತೆಗೆ ಶತಕ ಪೂರೈಸಿದ ಬಳಿಕ ಸಂಭ್ರಮಿಸದ ಬಗ್ಗೆ ಮಾತನಾಡಿದ ಕೊಹ್ಲಿ, "ಶತಕದ ಸಂಭ್ರಮಕ್ಕಿಂತ ಗೆದ್ದು ಅಂಕ ಗಳಿಸುವುದೇ ಮುಖ್ಯವಾಗಿತ್ತು. ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವುದೇ ಮುಖ್ಯವೆಂಬುದನ್ನು ಸಾರಲು ಪ್ರಜ್ಞಾಪೂರ್ವಕವಾಗಿಯೇ ಹಾಗೆ ಮಾಡಿದೆ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net