18 ಟೆಸ್ಟ್‌ಗಳಿಂದ ಗೆಲುವೇ ಇಲ್ಲ; 8 ವರ್ಷಗಳಿಂದ ಜಯದ ಬರ! ದಯನೀಯ ಸ್ಥಿತಿಗೆ ತಲುಪಿದ ಪಾಕಿಸ್ತಾನ ಟೆಸ್ಟ್ ತಂಡ! Pakistan Cricket
ಮೈದಾನದಲ್ಲಿ ನಿರಾಶೆಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು
Published on:
Copied
Follow Us
ಕ್ರಿಕೆಟ್: ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಬಲಿಷ್ಟ ತಂಡವೆಂದು ಗುರುತಿಸಿಕೊಂಡವರಲ್ಲಿ ಪಾಕಿಸ್ತಾನ ಕ್ರಿಕೆಟ್ (Pakistan Cricket) ತಂಡ ಕೂಡ ಒಂದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ದಯನೀಯ ಪರಿಸ್ಥಿಗೆ ತಲುಪಿದ್ದು, ಕಳೆದ 18 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ತಮ್ಮ ತಂಡ ಎಷ್ಟು ಬಲಹೀನವಾಗಿದೆ ಎಂದು ಜಗತ್ತಿಗೆ ರುಜುವಾತು ಪಡಿಸಿದೆ.
ಸದ್ಯ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಮೂರು ಟೆಸ್ಟ್ಗಳ ಟೂರ್ನಿಯಲ್ಲಿ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಸೋಲನ್ನು ಅನುಭವಿಸುವ ಮೂಲಕ ಕಳೆದ 18 ಪಂದ್ಯಗಳಲ್ಲಿ ಸರಳಿ ಸೋಲನ್ನು ಅನುಭವಿಸಿದ ತಂಡವಾಗಿ ಹೊರಬಿದ್ದಿದೆ. ಇದರಲ್ಲಿ 16 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದರೆ, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಲಾರ್ಡ್ಸ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಇಂಗ್ಲೆಂಡ್ ಟಾಸ್ ಸೋತು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್ನಲ್ಲಿ 290 ರನ್ಗಳಿಗೆ ಆಲ್ಔಟ್ ಆದರೆ ಪಾಕಿಸ್ತಾನ 110 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 208 ರನ್ಗಳನ್ನು ಗಳಿಸಿ ಪಾಕಿಸ್ತಾನಕ್ಕೆ 389 ರನ್ಗಳ ಗುರಿಯನ್ನು ನೀಡಿತು. ಆದರೆ, ಪಾಕಿಸ್ತಾನ ಕೇವಲ 194 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ, ಹೀನಾಯ ಸೋಲನ್ನು ಅನುಭವಿಸು.
ಈ ಮೂಲಕ ಸರಣಿ ಜೊತೆಗೆ ಕಳೆದ 8 ವರ್ಷಗಳಿಂದ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನು ಗೆಲ್ಲದ ತನ್ನ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.
ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ಸೋತಿದೆ. ಈಗ ಸೆಪ್ಟೆಂಬರ್ 9 ರಂದು ಮೂರನೇ ಪಂದ್ಯವಿದ್ದು, ಈ ಪಂದ್ಯವನ್ನು ಗೆದ್ದು ತನ್ನ ಸತತ ಸೋಲಿನ ದಾಖಲೆಯನ್ನು ಮುರಿಯುತ್ತಾ? ಅಥವಾ ಸರಣಿ ವೈಟ್ವಾಶ್ ಆಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ, (ಏಜನ್ಸೀಸ್).