ಹೌದು, ಕ್ಯಾಪ್ಟನ್ ರೋಲ್ ಇಲ್ಲಿ ತುಂಬಾ ಮುಖ್ಯ. ನನ್ನ ಪ್ರಕಾರ, ಹಾರ್ದಿಕ್ ಉತ್ತಮವಾಗಿ ಆಡಿಲ್ಲ. ಅದನ್ನು ಒಪ್ಪಿಕೊಳ್ಳೋಣ. ಆದರೆ ಉಳಿದ ಆಟಗಾರರು ಸಹ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಲ್ಲವೇ? ಇದಕ್ಕೆ ಉದಾಹರಣೆ, ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಲ್ಲಿದ್ದಾರೆ. ಅವರಿಂದ ಒಂದೊಳ್ಳೆ ಪ್ರದರ್ಶನ ಬಂದಿಲ್ಲ. ಇನ್ನು ತಿಲಕ್ ವರ್ಮಾ ಒಂದು ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ. ಹೀಗಿರುವಾಗ, ಹೇಗೆ ನೀವು ಗೆಲುವಿನ ಫಲಿತಾಂಶ ನೋಡಲು ಸಾಧ್ಯ? ನಿಜಕ್ಕೂ ಇದು ಬಹಳ ಬೇಸರ ಮೂಡಿಸುತ್ತೆ ಎಂದು ಹೇಳಿದರು,(ಏಜೆನ್ಸೀಸ್).