ಎಷ್ಟೇ ಹೇಳಿದ್ರೂ ಅವನಂತು ಬದಲಾಗಲ್ಲ! ವೈಭವ್ ಸೂರ್ಯವಂಶಿ ಬಗ್ಗೆ ಇದೆಂಥಾ ಮಾತು? ಜಿತೇಶ್​ ಶರ್ಮ ಹೇಳಿಕೆ ವೈರಲ್

ವೈಭವ್ ಸೂರ್ಯವಂಶಿ (ಎಡ), ಜಿತೇಶ್ ಶರ್ಮ (ಬಲ)
ವೈಭವ್ ಸೂರ್ಯವಂಶಿ (ಎಡ), ಜಿತೇಶ್ ಶರ್ಮ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್​ ಪಡೆದಿರುವ ವೈಭವ್ ಸೂರ್ಯವಂಶಿ
  • ವೈಭವ್ ಬಗ್ಗೆ ಆರ್​ಸಿಬಿಯ ಸ್ಟಾರ್​ ಕ್ರಿಕೆಟಿಗ ಅಚ್ಚರಿ ಹೇಳಿಕೆ
Vaibhav Suryavanshi: ಐಪಿಎಲ್​ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್​ ಸುದ್ದಿಗಳ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್​ ಪಡೆದಿರುವ ವೈಭವ್ ಸೂರ್ಯವಂಶಿ ಮಾತ್ರ ಸದ್ಯ ಅಂತಾರಾಷ್ಟ್ರೀಯ ಸ್ಟಾರ್​ ಕ್ರಿಕೆಟಿಗರ ಸ್ಪಾಟ್​ಲೈಟ್​ ಕಸಿದುಕೊಂಡಿರುವುದು ವಿಶೇಷ ಎನ್ನುವಂತಾಗಿದೆ.
ಕಳೆದ ವರ್ಷದ ಐಪಿಎಲ್​ ಮತ್ತು ಅಂಡರ್​-19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್​ ಪ್ರಿಯರ ನೆಚ್ಚಿನ ಯುವ ಆಟಗಾರ ಎಂದು ಗುರುತಿಸಿಕೊಂಡಿರುವ 'ಬೇಬಿ ಬಾಸ್'​, ಈ ಬಾರಿ ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯದೆ, ಐಪಿಎಲ್​ 19ನೇ ಆವೃತ್ತಿ ಆಡಲು ಮುಂದಾಗಿರುವುದು ಮತ್ತೊಂದು ವಿಶೇಷ. ರಾಜಸ್ಥಾನ ರಾಯಲ್ಸ್ ಪರ ಓಪನಿಂಗ್ ಬರಲು ಈಗಾಗಲೇ ಮೈದಾನದಲ್ಲಿ ಬೆವರಿಳಿಸುತ್ತಿರುವ ವೈಭವ್ ಬಗ್ಗೆ ಆರ್​ಸಿಬಿಯ ಸ್ಟಾರ್​ ಕ್ರಿಕೆಟಿಗ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಜಿ ಆರ್​ಸಿಬಿ ಹಾಗೂ ದಕ್ಷಿಣ ಆಫ್ರಿಕಾ ಕ್ಯಾಪ್ಟನ್​ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್​ ಸಂದರ್ಶನದಲ್ಲಿ ಮಾತನಾಡಿದ ಜಿತೇಶ್ ಶರ್ಮ, ಎಬಿಡಿ ಮಾತಿಗೆ ಟಕ್ಕರ್​ ಕೊಟ್ಟಿರುವುದು ಮಜಾವಾಗಿದೆ. ಆತ ಒಬ್ಬ ಗ್ರೇಟ್​ ಪ್ಲೇಯರ್​. ಅಂಡರ್​-19 ಕ್ರಿಕೆಟ್​ನಲ್ಲಿ ವೈಭವ್ ಆಡಿದ ರೀತಿ ನೋಡಿ ಖುಷಿಯಾಯ್ತು. ವಿಶ್ವಕಪ್​ನಂತಹ ಟೂರ್ನಿಯಲ್ಲಿ ಬಹಳ ಪ್ರಬುದ್ಧತೆ ಮೆರೆದರು. ಇಷ್ಟು ಚಿಕ್ಕ ವಯಸ್ಸಿಗೆ ವೃತ್ತಿಪರ ಆಟವನ್ನು ಆಡಿದ್ದು ಗಮನ ಸೆಳೆಯಿತು ಎಂದು ಎಬಿಡಿ ಹೇಳಿದರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಜಿತೇಶ್​, "ಅವನು ವೃತ್ತಿಪರನಲ್ಲ. ಇದನ್ನು ನಾನು ಒಪ್ಪಿಕೊಳ್ಳಲ್ಲ. ಎಲ್ಲರೂ ಅವನನ್ನು ಪ್ರೊಫೆಷನಲ್​ ಆಟಗಾರನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವನು ಮಾತ್ರ ಯಾವತ್ತಿಗೂ ಹಾಗೆ ಆಗೋದಿಲ್ಲ ಅಂತ ಹೇಳ್ತೀನಿ. ಈ ವಿಚಾರದಲ್ಲಿ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿತ್ತಿದ್ದೇನೆ. ರಾತ್ರಿಯಲ್ಲಿ ಐಸ್ ಕ್ರೀಮ್ ತಿನ್ನಬೇಡ ಅಂತ ಎಷ್ಟೇ ಹೇಳಿದ್ರು, ಅವನು ಅದನ್ನೇ ಕೇಳ್ತಾನೆ. ನಮ್ಮ ಮಾತೇ ಕೇಳುವುದಿಲ್ಲ ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net