ಮುಂಬೈ: ಜಪಾನ್ನ ಐಚಿ-ನಗೋಯಾದಲ್ಲಿ ಶನಿವಾರ ಆರಂಭಗೊಂಡಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತ ತಂಡ ಸ್ಪರ್ಧಿಸುತ್ತಿರುವ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್‌ನ ಕ್ರೀಡಾ ಅಭಿಯಾನವು 'ಅವಕಾಶದ ಶಕ್ತಿ' ಯನ್ನು ಮತ್ತು 'ಅಂತಿಮ ಗೆಲುವಿನ ಗೆರೆ’ ಯನ್ನು ತಲುಪುವ ಕನಸು ಕಾಣುವ ಮುನ್ನ, ‘ಆರಂಭಿಕ ಗೆರೆಯನ್ನು ತಲುಪುವ ಅವಕಾಶ ಪ್ರತಿ ಮಗುವಿಗೂ ಸಿಗಬೇಕು' ಎಂಬ ನಂಬಿಕೆಯನ್ನು ಎತ್ತಿಹಿಡಿಯುತ್ತದೆ. ಇದೇ ವೇಳೆ ನೀತಾ ಎಂ. ಅಂಬಾನಿ (Nita M. Ambani) ಅವರು, 'ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ' ಎಂದು ಏಷ್ಯಾಡ್ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.