ನೈಟ್ ​ಕ್ಲಬ್ ಗಲಾಟೆ: ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕ ಸ್ಥಾನಕ್ಕೆ ಕುತ್ತು!

ನೈಟ್​ಕ್ಲಬ್ ಗಲಾಟೆ: ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕ ಸ್ಥಾನಕ್ಕೆ ಕುತ್ತು!
ನೈಟ್​ಕ್ಲಬ್ ಗಲಾಟೆ: ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕ ಸ್ಥಾನಕ್ಕೆ ಕುತ್ತು!
Published on
ಲಂಡನ್: ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ( Ben Stokes )ಟೆಸ್ಟ್ ತಂಡದ ನಾಯಕನ ಸ್ಥಾನದಿಂದ ವಜಾಗೊಳ್ಳುವ ಭೀತಿಯಲ್ಲಿದ್ದು, ಜೂನ್ 17ಕ್ಕೆ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್‌ಸನ್ ಆಡುವ ಬಳಗದಲ್ಲಿ ಹೊರಬೀಳುವ ಭೀತಿಯಲ್ಲಿದ್ದಾರೆ.
ಕಿವೀಸ್ ವಿರುದ್ಧ ಲಾರ್ಡ್ಸ್ ಟೆಸ್ಟ್ ಗೆದ್ದ ಸಂಭ್ರಮಾಚರಣೆಯಲ್ಲಿ ತಂಡದ ಶಿಷ್ಟಾಚಾರವನ್ನು ಉಲ್ಲಂಸಿರುವ ಸ್ಟೋಕ್ಸ್ ಮತ್ತು ಅಟ್ಕಿನ್‌ಸನ್, ನೈಟ್ ಕ್ಲಬ್‌ವೊಂದರಲ್ಲಿ ಸೋಮವಾರ ಮುಂಜಾನೆ ನಡೆದ ಅಹಿತಕರ ಘಟನೆ ವೇಳೆ ಹಾಜರಿದ್ದರು ಎಂದು ವರದಿಯಾಗಿದೆ. ಘಟನೆಯ ಕುರಿತು ಇಬ್ಬರು ಆಟಗಾರರ ವಿರುದ್ಧದ ತನಿಖೆಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ದೇಶನ ನೀಡಿದ್ದು, ಸರಸೆನ್ಸ್ ರಗ್ಬಿ ಕ್ಲಬ್ ಆಟಗಾರನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಗಸ್ ಅಟ್ಕಿನ್‌ಸನ್ ಗಲಾಟೆ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ಋತುವಿನ ಮುಕ್ತಾಯದ ಸಂಭ್ರಮಾಚರಣೆಗೆ ಸರಸೆನ್ಸ್ ರಗ್ಬಿ ಕ್ಲಬ್ ಆಟಗಾರರು ನೈಟ್‌ಕ್ಲಬ್‌ಗೆ ಆಗಮಿಸಿದ್ದರು. ಈ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಬೆನ್ ಸ್ಟೋಕ್ಸ್ ನಾಯಕನ ಸ್ಥಾನದ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಆದರೆ, ನಿಜಕ್ಕೂ ಘಟನೆ ಏನು, ಅದಕ್ಕೆ ಕಾರಣಗಳೇನು ಎಂಬುದು ಇಂಗ್ಲೆಂಡ್-ವೇಲ್ಸ್ ಕ್ರಿಕೆಟ್ ಮಂಡಳಿ ಗೌಪ್ಯವಾಗಿರಿಸಿದೆ. ಕಳೆದ ಜನವರಿಯಲ್ಲಿ ಆಶಸ್ ಸರಣಿಯ ಆಸ್ಟ್ರೇಲಿಯಾ ಪ್ರವಾಸದಲ್ಲೂ ಕುಡಿದು ಗಲಾಟೆ ಮಾಡಿಕೊಂಡಿದ್ದರಿಂದ ಇಂಗ್ಲೆಂಡ್ ಆಟಗಾರರು, ಸಿಬ್ಬಂದಿಗೆ ರಾತ್ರಿ ವೇಳೆ ಸುತ್ತಾಡಲು ನಿರ್ಬಂಧ ವಿಧಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net