ಟಿಮ್​ ಶತಕ ವಂಚಿತ, ಫಿಲಿಫ್ಸ್ ಅರ್ಧಶತಕ! 5ನೇ ಟಿ20 ಪಂದ್ಯವನ್ನೂ ಗೆದ್ದು ಬೀಗಿದ ಕಿವೀಸ್​ ಪಡೆ | ​IND vs NZ T20

 ​IND vs NZ T20
ಟಿಮ್​ ಶತಕ ವಂಚಿತ, ಫಿಲಿಫ್ಸ್ ಅರ್ಧಶತಕ! 5ನೇ ಟಿ20 ಪಂದ್ಯವನ್ನೂ ಗೆದ್ದು ಬೀಗಿದ ಕಿವೀಸ್​ ಪಡೆ | ​IND vs NZ T20
Published on: 

IND vs NZ T20: ಇಂದು ಹ್ಯಾಮಿಲ್ಟನ್‌ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐದನೇ ಟಿ20 ಪಂದ್ಯದಲ್ಲಿ ಕಿವೀಸ್​ ಪಡೆ 7 ವಿಕೆಟ್​ಗಳಿಂದ ಗೆದ್ದು ಬೀಗುವ ಮೂಲಕ 2-3 ಅಂತರದಲ್ಲಿ ಟೀಮ್ ಇಂಡಿಯಾ ಎದುರು ವೈಟ್​ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ. ​

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್ (4)​ ಮತ್ತು ಅಭಿಷೇಕ್ ಶರ್ಮಾ (1) ಉತ್ತಮ ಓಪನಿಂಗ್ ಸಿಗಲಿಲ್ಲ. ನಂತರ ಕಣಕ್ಕಿಳಿದ ಇಶಾನ್ ಕಿಶನ್​ (61 ರನ್​, 32 ಎಸೆತಗಳು, 5 ಬೌಂಡರಿಗಳು, 5 ಸಿಕ್ಸರ್‌ಗಳು) ಮತ್ತು ನಾಯಕ ಶ್ರೇಯಸ್ ಅಯ್ಯರ್ (50 ರನ್​, 23 ಎಸೆತಗಳು, 3 ಬೌಂಡರಿಗಳು, 4 ಸಿಕ್ಸರ್‌ಗಳು) ಸ್ಫೋಟಕ ಅರ್ಧಶತಕಗಳನ್ನು ಸಿಡಿಸಿದ ಪರಿಣಾಮ, ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್‌ಗಳನ್ನು ಕಲೆಹಾಕಿತು.

ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್​ಗೆ ಫಿನ್​ ಆಲೆನ್​ ಕೇವಲ 2 ರನ್​ಗೆ ಔಟ್ ಆಗುವ ಮೂಲಕ ತಂಡಕ್ಕೆ ಬಿಗ್ ಶಾಕ್​ ನೀಡಿದರು. ಆದರೆ, ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಟಿಮ್​ ಸೈಫರ್ಟ್, ಏಕಾಂಗಿಯಾಗಿ 50 ಎಸೆತಗಳಲ್ಲಿ 93 ರನ್​ಗಳನ್ನು (11 ಬೌಂಡರಿ, 5 ಸಿಕ್ಸರ್​) ಬಾರಿಸಿದರು. ಆದರೆ, ಶತಕ ದಾಖಲಿಸುವಲ್ಲಿ ಎಡವಿದರು. ಅವರ ಬಳಿಕ ಕ್ರೀಸ್​ಗೆ ಅಂಟಿ ನಿಂತ ಗ್ಲೆನ್​ ಫಿಲಿಪ್ಸ್, ಅಜೇಯ 65 ರನ್ (8 ಬೌಂಡರಿ, 3 ಸಿಕ್ಸರ್​)​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನು, ತಂಡದ ಪರ ಬೌಲಿಂಗ್​ ಮಾಡಿದ ಭುವನೇಶ್ವರ್​ ಕುಮಾರ್​ 4 ಓವರ್​ ಮಾಡಿದ 41 ರನ್​ಗಳನ್ನು ನೀಡಿದರು. ಆದರೆ, ಒಂದೇ ಒಂದು ವಿಕೆಟ್​ ಕಬಳಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ಅರ್ಷದೀಪ್​ ಸಿಂಗ್​, ನಿತೀಶ್​ ಕುಮಾರ್​ ರೆಡ್ಡಿ ಮತ್ತು ವರುಣ್​ ಚಕ್ರವರ್ತಿ ತಲಾ ಒಂದು ವಿಕೆಟ್​ ಪಡೆದರು. ಇದು ತಂಡದ ಬೌಲಿಂಗ್​ ಪ್ರದರ್ಶನದಲ್ಲಿ ಅಂತಹ ಭರ್ಜರಿ ಪ್ರದರ್ಶನ​ ಏನು ನಡೆಯಲಿಲ್ಲ ಎಂಬುದನ್ನು ಒತ್ತಿ ಹೇಳಿದೆ.