ನಾಟಿಂಗ್ಹ್ಯಾಂ: ನ್ಯೂಜಿಲೆಂಡ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 160 ರನ್ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ 2-1ರಿಂದ ಸರಣಿ ಗೆದ್ದುಕೊಂಡಿತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತೀಜಿವನಕ್ಕೆ ಸೋಲಿನ ವಿದಾಯ ಹೇಳಿದರು.
373 ರನ್ ಸವಾಲಿಗೆ ಪ್ರತಿಯಾಗಿ 4 ವಿಕೆಟ್ಗೆ 103 ರನ್ಗಳಿಂದ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ಭೋಜನ ವಿರಾಮದ ಬಳಿಕ 212 ರನ್ಗಳಿಗೆ ಆಲೌಟ್ ಆಯಿತು. ಕಿವೀಸ್ 25 ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಸರಣಿ ಜಯಿಸಿತು. ಭಾನುವಾರ 4ನೇ ದಿನದಾಟದ ನಡುವೆಯೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದ 35 ವರ್ಷದ ಸ್ಟೋಕ್ಸ್, ಆರಂಭಿಕರಾಗಿ ಆಡಿದ ತನ್ನ ಕೊನೇ ಇನಿಂಗ್ಸ್ನಲ್ಲಿ 30 ರನ್ಗೆ ಔಟಾಗಿದ್ದರು.
ಸ್ಟೋಕ್ಸ್ ಇನ್ನು ಕೌಂಟಿಯಲ್ಲಿ ಡರ್ಹ್ಯಾಂ ಪರ ಮತ್ತು ಇತರ ್ರಾಂಚೈಸಿ ಟಿ20 ಲೀಗ್ಗಳಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಖಚಿತಪಡಿಸಿದ್ದಾರೆ.