ಆತನನ್ನು ಮರೆತಿದ್ದೇ... ಕಿವೀಸ್​​​ ಇಷ್ಟು ಹೀನಾಯವಾಗಿ ಸೋಲಲು ಆ ಒಂದು ಮಿಸ್ಟೇಕ್​ ಕಾರಣ! ಪಂದ್ಯಕ್ಕೂ ಮೊದಲೇ ಸೋಲಿನ ಮುನ್ಸೂಚನೆ | New Zealand

ನ್ಯೂಜಿಲೆಂಡ್​ ತಂಡದ ನಾಯಕ ಮಿಚೆಲ್ ಸ್ಯಾಟ್ನರ್
ನ್ಯೂಜಿಲೆಂಡ್​ ತಂಡದ ನಾಯಕ ಮಿಚೆಲ್ ಸ್ಯಾಟ್ನರ್
Published on

ಪ್ರಮುಖ ಮುಖ್ಯಾಂಶಗಳು

  • 96 ರನ್​ಗಳಿಂದ ಭಾರತ ಎದುರು ಹೀನಾಯ ಸೋಲು
  • ಚೊಚ್ಚಲ ಟಿ20 ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ಅವಕಾಶ ಮಿಸ್​
  • ಅದೊಂದು ಮಿಸ್ಟೇಕ್​ ಮಾಡಿದಿದ್ದರೇ ಇಂಥಾ ಹೀನಾಯ ಸೋಲು ಬರುತ್ತಿರಲಿಲ್ಲ
New Zealand: ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ 96 ರನ್​ಗಳ ಹೀನಾಯ ಸೋಲುಂಡ ನ್ಯೂಜಿಲೆಂಡ್​, ತಮ್ಮ ಚೊಚ್ಚಲ ಟಿ20 ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ಅವಕಾಶವನ್ನು ಎರಡನೇ ಬಾರಿಗೆ ಅಂತಿಮ ಹಣಾಹಣಿಯಲ್ಲಿ ಕಳೆದುಕೊಂಡಿತು. ಇದು ಅವರ ಅಪಾರ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳ ಹೃದಯ ಚೂರಾಗಿಸಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಯಾಪ್ಟನ್​ ಮಿಚೆಲ್​ ಸ್ಯಾಟ್ನರ್​​ಗೆ ಪಂದ್ಯ ಆರಂಭಕ್ಕೂ ಮುನ್ನವೇ ಸೋಲಿನ ಮುನ್ಸೂಚನೆ ಸಿಕ್ಕಿತ್ತು. ಆದರೆ, ಅದನ್ನು ಸರಿಯಾಗಿ ಅರಿಯದೆ, ತಮ್ಮ ಟೀಮ್​ ಮ್ಯಾನೇಜ್​ಮೆಂಟ್​ ಮಾತು ಕೇಳಿಕೊಂಡು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಂತು ಸತ್ಯ ಎಂದೇ ಹೇಳಬಹುದು. ಭಾರತ ವಿರುದ್ಧ ಫೈನಲ್ ಪಂದ್ಯದಲ್ಲಿ ಯಾರನ್ನೆಲ್ಲ ಆಡಿಸಬೇಕು ಎಂದು ನಿರ್ಧರಿಸಿದ ಸ್ಯಾಟ್ನರ್, ತಾವೊಬ್ಬ ಸ್ಪಿನ್ ಬೌಲರ್ ಆಗಿ ಅಹಮದಾಬಾದ್​ ಪಿಚ್​ನಲ್ಲಿ ಆಫ್​-ಸ್ಪಿನ್ ಮಾಡುವವರ ಕೈಚಳಕ ಖಂಡಿತ ಕಮಾಲ್ ಮಾಡಲಿದೆ​ ಎಂಬುದನ್ನೇ ಮರೆತಿದ್ದು ದುರಂತ.
ಆಫ್-ಸ್ಪಿನ್ನರ್ ಕೋಲ್ ಮೆಕ್‌ಕಾಂಚಿ ತಮ್ಮ ತಂಡದಲ್ಲಿಯೇ ಇದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಎರಡು ಬಹುಮುಖ್ಯ ವಿಕೆಟ್‌ಗಳನ್ನು ಪಡೆಯುವ ಮೂಲಕ ಸೌತ್ ಆಫ್ರಿಕಾ ಪಡೆಯ ಫೈನಲ್​ ಕನಸನ್ನು ಛಿದ್ರಗೊಳಿಸಲು ದೊಡ್ಡ ಕೊಡುಗೆ ನೀಡಿದ್ದೇ ಈತ. ಹೀಗಿರುವಾಗ, ತಂಡದಲ್ಲಿ ಆಫ್​-ಸ್ಪಿನ್​ ಮಾಡುವ ಬೌಲರ್​ ಅನ್ನು ಆಡಿಸುವ ನಿರ್ಧಾರಕ್ಕೆ ಮುಂದಾಗದ ಮ್ಯಾನೇಜ್‌ಮೆಂಟ್, ಕೋಲ್​ರನ್ನು ಕೂರಿಸಿ, ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ಕಣಕ್ಕಿಳಿಸಿತು. ಇಲ್ಲೇ ಆಗಿದ್ದು ಎಡವಟ್ಟು.
ಸ್ವತಃ ಇದನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಗಮನಿಸಿದ್ದಾರೆ. ಕಿವೀಸ್ ತಂಡದಲ್ಲಿ ಆಫ್-ಸ್ಪಿನ್ನರ್ ಇಲ್ಲದಿರುವುದು ನನಗೆ ಆಶ್ಚರ್ಯ ತಂದಿತು ಎಂದರು. ಎಡಗೈ ಬೌಲರ್‌ಗಳಿಂದ ತುಂಬಿದ್ದ ನ್ಯೂಜಿಲೆಂಡ್​ಗೆ ಒಬ್ಬ ಆಫ್​-ಸ್ಪಿನ್ನರ್​ ಅವಶ್ಯಕತೆ ಇತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದಿದ್ದರೆ, ಖಂಡಿತ ಕಿವೀಸ್​ ಪಡೆಗೆ ಇಂತಹ ಹೀನಾಯ ಸೋಲು ಬರುತ್ತಿರಲಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net