ಮಾತು ಮುಂದುವರಿಸಿದ ಲಬುಶೇನ್, ಕ್ರಿಕೆಟ್ನಲ್ಲಿ ಚೆಂಡನ್ನು ಬಟ್ಟೆಯಿಂದ ಒರೆಸುವುದು ಮತ್ತು ಬಟ್ಟೆಯ ಮೇಲೆ ಉಜ್ಜುವುದು ಸಾಮಾನ್ಯ. ಚೆಂಡಿನ ಒಂದು ಭಾಗ ಹೊಳೆಯಲು ಈ ರೀತಿ ಮಾಡಲಾಗುತ್ತದೆ. ಆದರೆ, ನನ್ನ ವೃತ್ತಿಪರ ವೃತ್ತಿಜೀವನದಲ್ಲಿ ಚೆಂಡು ಈ ರೀತಿ ಬಣ್ಣ ಬದಲಾಯಿಸುವುದನ್ನು ನಾನೆಂದಿಗೂ ನೋಡೇ ಇಲ್ಲ. ಆದಾಗ್ಯೂ, ಮುಂಬರುವ ಪಂದ್ಯಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಲೀಗ್ ಸಂಘಟಕರು ಎಚ್ಚರಿಕೆ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಲಬುಶೇನ್ ಹೇಳಿದರು.