ಅನಂತ್-ರಾಧಿಕಾ ಮದುವೆ ನಡೆದ ಸ್ಥಳದಲ್ಲೇ ಅರ್ಜುನ್ ತೆಂಡೂಲ್ಕರ್ ವಿವಾಹ ಸಂಭ್ರಮ: ನೀತಾ ಅಂಬಾನಿ ಭಾವನಾತ್ಮಕ ಮಾತು Nita Ambani
Nita Ambani (ಚಿತ್ರ Instagram)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಜೋಡಿಯ ವಿವಾಹ ಪೂರ್ವ ಸಂಭ್ರಮಾಚರಣೆ
ವಿವಾಹ ಪೂರ್ವ ಸಂಭ್ರಮಾಚರಣೆಗಳು ಗುಜರಾತ್‌ನ ಜಾಮ್‌ನಗರದಲ್ಲಿ ಅತ್ಯಂತ ವೈಭವದಿಂದ ನಡೆಯುತ್ತಿದೆ
ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತು ಅಂಬಾನಿ ಹಂಚಿಕೊಂಡ ಟಿಪ್ಪಣಿಯೊಂದು ಸದ್ಯ ಫುಲ್ ವೈರಲ್
ಸಾನಿಯಾ, ನಿನ್ನ ವ್ಯಕ್ತಿತ್ವದಲ್ಲಿ ಒಂದು ವಿಶೇಷವಾದ ಅನುಭವ ಮತ್ತು ಸಕರಾತ್ಮಕತೆ ಇದೆ
ಗುಜುರಾತ್: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಜೋಡಿಯ ವಿವಾಹ ಪೂರ್ವ ಸಂಭ್ರಮಾಚರಣೆಗಳು ಗುಜರಾತ್‌ನ ಜಾಮ್‌ನಗರದಲ್ಲಿ ಅತ್ಯಂತ ವೈಭವದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತು ಅಂಬಾನಿ (Nita Ambani) ಹಂಚಿಕೊಂಡ ಟಿಪ್ಪಣಿಯೊಂದು ಸದ್ಯ ಫುಲ್ ವೈರಲ್ ಆಗಿದ್ದು, ಇದು ಅವರಿಬ್ಬರ ಕುಟುಂಬಗಳ ನಡುವಿನ ಗಾಢವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಸಾನಿಯಾ ಜೊತೆ ಅರ್ಜುನ್ ವಿವಾಹವಾಗುತ್ತಿರುವ ಹಿನ್ನಲೆ, ಸಂತೋಷ ವ್ಯಕ್ತಪಡಿಸಿದ ನೀತಾ ಅಂಬಾನಿ, ಎಲ್ಲರಿಗೂ ಜಾಮ್ನಗರಕ್ಕೆ ಸ್ವಾಗತ ನಾವಿಂದು ಅನಂತ್ ಮತ್ತು ರಾಧಿಕಾ ಎರಡು ವರ್ಷಗಳ ಹಿಂದೆ ಮದುವೆಯಾದ ಸ್ಥಳದಲ್ಲಿ ಒಟ್ಟುಗೂಡಿದ್ದೇವೆ. ಸಚಿನ್ ನೀವು ಯಾವಾಗಲು ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ. ಅರ್ಜುನ್ ಬೆಳೆಯುವುದನ್ನು ನಾವು ನೋಡಿದ್ದೇವೆ. ಈಗ ಅವರು ಹೊಸ ಜೀವನಕ್ಕೆ ಕಾಲಿಡುವ ಹಂತದಲ್ಲಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ ಎಂದು ಭಾವನಾತ್ಮಕವಾಗಿ ಉಲ್ಲೇಖಿಸಿದರು.
ಸಾನಿಯಾ, ನಿನ್ನ ವ್ಯಕ್ತಿತ್ವದಲ್ಲಿ ಒಂದು ವಿಶೇಷವಾದ ಅನುಭವ ಮತ್ತು ಸಕರಾತ್ಮಕತೆ ಇದೆ. ನಿಮ್ಮಿಬ್ಬರ ಈ ಜೋಡಿಯನ್ನು ನೋಡುವುದೇ ಒಂದು ಸಂಭ್ರಮ. ದೇವರು ನಿಮ್ಮ ಹೊಸ ಪಯಣಕ್ಕೆ ಆಶೀರ್ವದಿಸಲಿ ಎಂದು ಹಾರೈಸಿದರು.
ಅಂಬಾನಿ ಕುಟುಂಬದಿಂದ ಬಂದ ಸಂದೇಶಗಳಿಗೆ ಪ್ರತಿಕ್ರಿಯಿಸಿದ ಸಚಿನ್, ದಂಪತಿಯ ಮುಂದಿನ ಜೀವನಕ್ಕೆ ಆರೈಸಲು ಇದಕ್ಕಿಂತ ಉತ್ತಮ ಸ್ಥಳ ಮತ್ತು ಉತ್ತಮ ಜನರನ್ನು ಆಯ್ಕೆ ಮಾಡಬಹುದಿತ್ತು ಎಂದು ನಾನೆಂದಿಗೂ ಭಾವಿಸುವುದಿಲ್ಲ. ನಮ್ಮನ್ನು ಇಲ್ಲಿಗೆ ಕರೆ ತಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಹೇಳಿದರು.
ಆದಾಗ್ಯೂ, ಮಗನೊಬ್ಬ ಹುಡುಗಿಯನ್ನು ಪರಿಚಯಿಸಲು ಮನೆಗೆ ಕರೆತಂದಾಗ, ಮಗ ಬೆಳೆದು ದೊಡ್ಡವನಾಗಿದ್ದಾನೆ ಎಂಬುದು ತಿಳಿದು ಬರುತ್ತದೆ. ಇದು ನಮ್ಮ ಇಡೀ ಕುಟುಂಬಕ್ಕೆ ಅತ್ಯಂತ ವಿಶೇಷ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ಬಣ್ಣಿಸಿದರು.
ಸಾನಿಯಾ ಜೊತೆ ಹೊಸ ಜೀವನ ಪ್ರಯಾಣ ಆರಂಭಿಸುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ. ನೀವಿಬ್ಬರೂ ಒಬ್ಬರನ್ನೊಬ್ಬರು ಅತೀವವಾಗಿ ಪ್ರೀತಿಸುತ್ತಿರುವುದು ನಿಮ್ಮ ಕಣ್ಣುಗಳಲ್ಲೇ ಕಾಣುತ್ತಿದೆ. ನೀನು ಅವಳನ್ನು ಎಷ್ಟು ಪ್ರೀತಿಸುತ್ತೀಯೋ, ಅಷ್ಟೇ ನಿನ್ನನ್ನು ಪ್ರೀತಿಸುವ ವ್ಯಕ್ತಿಯನ್ನು ಕಂಡುಕೊಂಡಿದ್ದಕ್ಕೆ ನನಗೆ ನಿಜವಾಗಲೂ ಹೆಮ್ಮೆ ಇದೆ ಎಂದು ಹೇಳಿದರು.
ಅರ್ಜುನ್-ಸಾನಿಯಾ ಜೋಡಿಗೆ ಶುಭಾಶಯ ತಿಳಿಸಿದ ಮುಂಬೈ ಇಂಡಿಯನ್ಸ್!
ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ವಿವಾಹವಾಗುತ್ತಿರುವ ಜೋಡಿಗೆ ಶುಭ ಹಾರೈಸಿದ್ದಾರೆ. ಪೋಸ್ಟ್ನ ಶೀರ್ಷಿಕೆಯಲ್ಲಿ "ನಿಮ್ಮ ಪ್ರೀತಿಗೆ ಧನ್ಯವಾದಗಳು". ಅರ್ಜುನ್ ಮತ್ತು ಸಾನಿಯಾ ಇತರರಿಗಿಂತ ಉತ್ತಮ ಜೀವನವನ್ನು ನಡೆಸಲು ಪ್ರಾರಂಭಿಸುತ್ತಿರುವಾಗ ಅವರಿಗೆ ಪ್ರೀತಿ, ಗೌರವ ಮತ್ತು ಒಗ್ಗಟ್ಟು ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದಿದೆ.
ಫೆಬ್ರವರಿ 25 ರಂದು ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ತೆಂಡೂಲ್ಕರ್ ಕುಟುಂಬದ ಜೊತೆಗೆ ಸಾನಿಯಾ ಅವರ ಕುಟುಂಬ, ನೀತಾ ಅಂಬಾನಿ, ಮುಖೇಶ್ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಭಾಗವಹಿಸಿದ್ದರು (ಏಜೆನ್ಸೀಸ್).