ನಿರೀಕ್ಷೆಯಂತೆ, ಮೊದಲ ರೇಸ್‌ನ ಆರಂಭದಲ್ಲೇ ಆರವ್ ಮೂರನೇ ಸ್ಥಾನಕ್ಕೆ ಕುಸಿದರು, ಚೆನ್ನೈನ ಯಶ್ವಿನ್ ಕಿಶೋರ್ (ಪೆರೆಗ್ರಿನ್ ರೇಸಿಂಗ್) ಅವರ ಹಿಂದೆ ಉಳಿದರು. ಆದರೂ ಧೃತಿಗೆಡದ ಜಮ್ನಾಬಾಯಿ ನರ್ಸಿ ಶಾಲೆಯ ಈ ವಿದ್ಯಾರ್ಥಿ, ಉತ್ತಮ ಪ್ರಯತ್ನ ನಡೆಸಿ ಶೀಘ್ರದಲ್ಲೇ ತಮ್ಮ ಎರಡನೇ ಸ್ಥಾನವನ್ನು ಮರಳಿ ಪಡೆದು ಕೊನೆಯವರೆಗೂ ಅದನ್ನು ಕಾಯ್ದುಕೊಂಡರು. ಈ ರೇಸ್‌ನಲ್ಲಿ ಜಿದಾನ್ ಅನೀಸ್ ಪ್ರಥಮ ಸ್ಥಾನ ಹಾಗೂ ಕೊಲ್ಹಾಪುರದ ಆಯಾನ್ಶ್ ಪಾಟೀಲ್ ತೃತೀಯ ಸ್ಥಾನ ಪಡೆದರು.