ಅದಕ್ಕೆಲ್ಲ ಈಗ ಅಷ್ಟೊಂದು ಸಮಯವಿಲ್ಲ! ತಂಡದ ನಾಯಕನಿಗೆ ಆಗುತ್ತಿದ್ದ ಅವಮಾನ ತಪ್ಪಿಸಿದ ತಿಲಕ್ ಬಿಚ್ಚುನುಡಿ

ಮುಂಬೈ ಇಂಡಿಯನ್ಸ್ ತಂಡದ ಆಟಗಾರರು
ಮುಂಬೈ ಇಂಡಿಯನ್ಸ್ ತಂಡದ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • ತಿಲಕ್​ ಶತಕದಾಟಕ್ಕೆ ತಲೆಬಾಗಿದ ಗುಜರಾತ್ ಟೈಟನ್ಸ್​
  • 45 ಎಸೆತದಲ್ಲಿ ಅಜೇಯ 101 ರನ್​ ಬಾರಿಸಿದ ತಿಲಕ್ ವರ್ಮಾ
  • ಯುವ ಕ್ರಿಕೆಟಿಗನ ಸ್ಪೋಟಕ ಇನ್ನಿಂಗ್ಸ್​ಗೆ ಅಭಿಮಾನಿಗಳು ಖುಷ್
Tilak Varma: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್​ನಲ್ಲಿ ಸತತ ಸೋಲುಗಳಿಂದ ಭಾರೀ ಟೀಕೆ, ಛೀಮಾರಿಗಳಿಗೆ ತುತ್ತಾಗಿದ್ದ ಐದು ಬಾರಿ ಚಾಂಪಿಯನ್​ ತಂಡ ಮುಂಬೈ ಇಂಡಿಯನ್ಸ್​, ಕಡೆಗೂ ಗುಜರಾತ್ ಟೈಟನ್ಸ್​ ಎದುರು ದೊಡ್ಡ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದರಿಂದ ಸಪ್ಪೆ ಮುಖ ಹಾಕಿಕೊಂಡು ಕುಳಿತ್ತಿದ್ದ ಪಾಂಡ್ಯ ಮುಖದಲ್ಲಿ ಖುಷಿ ಅರಳಿದ್ದು ವಿಶೇಷ. 
ನಿನ್ನೆ (ಏ.20) ನಡೆದ ಗುಜರಾತ್ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿಯೂ ಸೋಲುವ ಹಂತದಲ್ಲಿದ್ದ ಮುಂಬೈ ಇಂಡಿಯನ್ಸ್​ಗೆ ತಿಲಕ್​ ವರ್ಮಾ ಅವರಿಂದ ಬಂದ ಸ್ಫೋಟಕ ಶತಕ ಗೆಲುವಿನ ದಾರಿಗೆ ಕೊಂಡೊಯ್ದಿತು. ನಮನ್​ ಧಿರ್​ ಜೊತೆಗೂಡಿ ಅಬ್ಬರದ ಇನ್ನಿಂಗ್ಸ್ ಆಡಿದ ತಿಲಕ್​, 45 ಎಸೆತದಲ್ಲಿ ಅಜೇಯ 101 ರನ್​ ಗಳಿಸುವ ಮೂಲಕ ಎಂಐಗೆ ಭರ್ಜರಿ ಗೆಲುವು ತಂದುಕೊಟ್ಟರು. ಇದರಿಂದ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಗಳಿಸಿದ್ದ ಈಗ ನೇರವಾಗಿ 7ನೇ ಸ್ಥಾನಕ್ಕೆ ಜಿಗಿದಿರುವುದು ಆಶ್ಚರ್ಯ.    
ವೇಗದ ಶತಕ ಬಾರಿಸಿದ ತಿಲಕ್ ಮಾತನಾಡಿ,​ ಖಂಡಿತ! ನನ್ನ ಮೊದಲ ಸೆಂಚುರಿ ಸದಾ ವಿಶೇಷವಾಗಿ ಉಳಿಯಲಿದೆ. ಇಲ್ಲಿಂದ ನನಗೆ ಇನ್ಯಾವುದಕ್ಕೂ ಅಷ್ಟು ಸಮಯ ಇರೋದಿಲ್ಲ. ಪ್ರತಿಯೊಂದು ಪಂದ್ಯವು ಬಹಳ ಮುಖ್ಯ. ಮಿಡಲ್​ ಓವರ್​ಗಳಲ್ಲಿ ಹೆಚ್ಚು ಸಮಯ ಕಾದು ಗಮನಿಸಿದೆ. ನಂತರ ಸಮಯ ವ್ಯರ್ಥ ಮಾಡದೆ, ಇನ್ನಿಂಗ್ಸ್​ ಕೈಗೆತ್ತಿಕೊಂಡೆವು.  ಕಳೆದ ಐದು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅಷ್ಟಾಗಿ ಸಮಯ ಸಿಕ್ಕಿಲ್ಲ ಎಂದರು.
ಜಿಟಿ ವಿರುದ್ಧದ ಪಂದ್ಯದಲ್ಲಿ ಸಮಯ ಸಿಕ್ಕಿತು. ಇದನ್ನೇ ಗಮನಿಸಿದ ನಾನು, ಮೊದಲ 20 ಬಾಲ್​ಗಳನ್ನು ನಿಧಾನವಾಗಿ ಆಡಿದೆ. ಆ ನಂತರ ನನ್ನ ಸಾಮರ್ಥ್ಯ ಮತ್ತು ತಂಡದ ಅಗತ್ಯತೆ ಬಗ್ಗೆ ಸೂಕ್ಷ್ಮವಾಗಿ ಅರಿತು, ಪರಿಸ್ಥಿತಿಗೆ ತಕ್ಕಂತೆ ಸ್ಫೋಟಕ ಇನ್ನಿಂಗ್ಸ್ ಆಡಲು ಪ್ರಾರಂಭಿಸಿದೆ.  ಈಗಲೂ ನನ್ನ ಮಿದುಳು ಬೇಸಿಕ್​ಗಳನ್ನು ಪಾಲಿಸುವಂತೆ ಹೇಳುವುದು ಖುಷಿಯಾಗುತ್ತೆ. ನನ್ನೊಂದಿಗೆ ಉತ್ತಮ ಬ್ಯಾಟಿಂಗ್​ ನೀಡಿದ ನಮನ್​ ಕೂಡ ಈ ಚಪ್ಪಾಳೆ, ಅಭಿನಂದನೆ ಸಲ್ಲುತ್ತದೆ ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net