Mumbai Indians: ಪ್ರಸ್ತುತ, 19ನೇ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಸರಣಿ ಸೋಲಿನಿಂದ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿದೆ. ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಐದು ಬಾರಿ ಚಾಂಪಿಯನ್ಸ್ ಮುಡಿಗೇರಿಸಿಕೊಂಡ ತಂಡ, ಈಗ ಒಂದೇ ಒಂದು ಗೆಲುವಿಗೂ ತೀರ ಹೆಣಗಾಡುವಂತ ಪರಿಸ್ಥಿತಿಗೆ ತಲುಪಿದೆ. ಹೀಗಿರುವಾಗಲೇ, ಇಂದು (ಮೇ.02) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡಲಿದ್ದು, ಈ ಮ್ಯಾಚ್ ಏನಾದರೂ ಸೋತರೆ ಮುಂಬೈ ಫ್ಲೇಆಫ್ ಕನಸು ನುಚ್ಚುನೂರಾಗುವುದರಲ್ಲಿ ಅನುಮಾನವೇ ಇಲ್ಲ.