

ಪ್ರಮುಖ ಮುಖ್ಯಾಂಶಗಳು
Hardik Pandya:
ಐಪಿಎಲ್ 2027ರ ಹರಾಜು ಮತ್ತು ಆಟಗಾರರ ಬದಲಾವಣೆ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2015ರಲ್ಲಿ ಮುಂಬೈ ತಂಡದ ಮೂಲಕ ಲೀಗ್‌ಗೆ ಕಾಲಿಟ್ಟಿದ್ದ ಹಾರ್ದಿಕ್, 2022ರಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ಬಳಿಕ 2024ರಲ್ಲಿ ಮತ್ತೆ ಮುಂಬೈಗೆ ಮರಳಿ ನಾಯಕತ್ವ ವಹಿಸಿಕೊಂಡರೂ, ತಂಡದ ಕಳಪೆ ಪ್ರದರ್ಶದಿಂದಾಗಿ ಅವರ ಭವಿಷ್ಯದ ಬಗ್ಗೆ ನಾನಾ ಊಹಾಪೋಹಗಳು ಎದ್ದಿವೆ.
ಆಟಗಾರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಹೆಚ್ಚಿನ ಸ್ಪಷ್ಟತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಗವಾಸ್ಕರ್ ಪ್ರತಿಪಾದಿಸಿದ್ದಾರೆ. ಮಿಡ್ ಡೇ ಪತ್ರಿಕೆಯಲ್ಲಿ ಬರೆದಿರುವ ಅವರು, "ಒಬ್ಬ ಆಟಗಾರನಾದವನು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹೋದಾಗ ಅದು ಜಗತ್ತಿಗೆ ತಿಳಿಯುತ್ತದೆ. ಆದರೆ ಅವರ ನಡುವೆ ನಡೆಯುವ ಹಣಕಾಸಿನ ವ್ಯವಹಾರ ಕೇವಲ ಬಿಸಿಸಿಐ, ಆಟಗಾರ ಹಾಗೂ ಸಂಬಂಧಪಟ್ಟ ಎರಡು ಫ್ರಾಂಚೈಸಿಗಳುಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಪ್ರತಿಯೊಂದು ತಂಡಕ್ಕೆ ನೀಡಲಾದ ಒಟ್ಟು ಹಣದ ಮಿತಿಯನ್ನು (ಸ್ಯಾಲರಿ ಕ್ಯಾಪ್) ಸರಿಯಾಗಿ ಪಾಲಿಸಲಾಗಿದೆಯೇ ಇಲ್ಲವೇ ಎಂಬುದು ಇತರ ತಂಡಗಳಿಗೆ ತಿಳಿಯುವುದಿಲ್ಲ. ಹೀಗಾಗಿ ಈ ಆರ್ಥಿಕ ವಹಿವಾಟಿನ ವಿವರಗಳನ್ನು ಬಹಿರಂಗಪಡಿಸಿದರೆ ಲೀಗ್‌ನಲ್ಲಿ ಸದಾ ಪಾರದರ್ಶಕತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.