ಕ್ಯಾಪ್ಟನ್ಸಿ ಅಲ್ಲ, ತಂಡದಿಂದಲೇ ಪಾಂಡ್ಯಗೆ ಗೇಟ್​ಪಾಸ್​! ರಾಜಸ್ಥಾನ ರಾಯಲ್ಸ್​ನ ಈ ಆಟಗಾರನಿಗೆ ಎಂಐ ಡಿಮಾಂಡ್​ ​

ಆರ್​ಆರ್ ತಂಡದ​ ಆಟಗಾರರು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್​ ಪಾಂಡ್ಯ
ಆರ್​ಆರ್ ತಂಡದ​ ಆಟಗಾರರು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್​ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಕ್​ ಟು ಬ್ಯಾಕ್​ ಎರಡು ಸೀಸನ್​ಗಳಲ್ಲಿ ಕಳಪೆ ಪ್ರದರ್ಶನ
  • ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್​ ಪಾಂಡ್ಯ ಕೈಬಿಡಲು ಫ್ರಾಂಚೈಸಿ ನಿರ್ಧಾರ
  • ರಾಜಸ್ಥಾನ ರಾಯಲ್ಸ್ ಜೊತೆಗೆ ಟ್ರೇಡ್​ ಡೀಲ್​, ಈ ಆಟಗಾರನಿಗೆ ಬೇಡಿಕೆ
ನವದೆಹಲಿ: ಈ ವರ್ಷದ ಐಪಿಎಲ್​ 19ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆ ಸ್ಥಾನದಲ್ಲಿ ಉಳಿಸಿದ ಕ್ಯಾಪ್ಟನ್, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ವಿರುದ್ಧ ಅದ್ಯಾಕೋ ಟೀಮ್ ಮ್ಯಾನೇಜ್​ಮೆಂಟ್​ ಸಂಪೂರ್ಣ ಅಸಮಾಧಾನ ಹೊರಹಾಕಿದೆ. ಎಂ ತಂಡದ ನಾಯಕನಾಗಿ ಪಾಂಡ್ಯ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೂ ಬಲಿಷ್ಠ ಟೀಮ್​ಗಳಲ್ಲಿ ಒಂದಾಗಿದ್ದ ಮುಂಬೈ, ಪೈಪೋಟಿ ಕೊಡುವುದಿರಲಿ, ಅಂಕಪಟ್ಟಿಯ ಕೆಳ ಸ್ಥಾನಕ್ಕೆ ಬಂದು, ಎಕ್ಸಿಟ್​ ಆಗುತ್ತಿರುವುದು ಸದ್ಯ ಫ್ರಾಂಚೈಸಿಯ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಈಗ ಹಾರ್ದಿಕ್​ ಹೊರನೂಕುವಿಕೆಗೆ ದೊಡ್ಡ ಕಾರಣವೂ ಆಗಿದೆ.
ಗುಜರಾತ್ ಟೈಟಾನ್ಸ್ ತಂಡವನ್ನು ಒಂದು ಬಾರಿ ಚಾಂಪಿಯನ್ಸ್, ಇನ್ನೊಂದು ಫೈನಲ್​ ಹಂತಕ್ಕೆ ಕೊಂಡೊಯ್ದಿದ್ದ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ನಾಯಕನಾದೆ ಮೇಲೆ, ತಂಡವನ್ನು ಪ್ಲೇಆಫ್​ ಹಂತಕ್ಕೂ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಫ್ರಾಂಚೈಸಿಯ ಆಟಗಾರರು ತನ್ನೊಂದಿಗೆ ಉತ್ತಮ ಮಾತುಕತೆ, ಹೊಂದಾಣಿಕೆ ಹೊಂದಿಲ್ಲ ಎಂಬುದು ಪರೋಕ್ಷವಾಗಿ ಹಾರ್ದಿಕ್​ ಮಾತಾಗಿದೆ. ಇನ್ನೊಂದೆಡೆ, ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯಗಳಿಂದ ಮುಂಬೈ ಇಂಡಿಯನ್ಸ್​ ಸಾಲು ಸಾಲು ಸೋಲುಗಳನ್ನು ಕಂಡಿತು ಎಂಬ ಸುದ್ದಿಗಳಿವೆ. ಅಸಲಿಗೆ, ಜಸ್ಪ್ರೀತ್​ ಬುಮ್ರಾ ಮತ್ತು ಒಂದಷ್ಟು ಆಟಗಾರರು ಪಾಂಡ್ಯ ಮಾತು ಕೇಳಲು ಸಿದ್ಧವಿರಲಿಲ್ಲ. ಅದೇ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು ಎನ್ನಲಾಗಿದೆ.
ವರದಿಗಳ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಜೊತೆ ಟ್ರೇಡ್​ ಡೀಲ್​ ಮಾಡಿಕೊಳ್ಳಲು ಮುಂದಾಗಿದೆ ಎಂಬ ಸುದ್ದಿಗಳು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್​ರನ್ನು ಕ್ಯಾಪ್ಟನ್ಸಿಯಿಂದ ತೆಗೆಯುವುದಲ್ಲ, ಬದಲಿಗೆ ತಂಡದಿಂದಲೇ ಹೊರನೂಕಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಜ್ಜಾಗಿದೆ. ಇದಕ್ಕಾಗಿ, ಆರ್​ಆರ್​ ಜೊತೆಗೆ ಟ್ರೇಡ್​ ಡೀಲ್​ಗೆ ಮಾತುಕತೆ ನಡೆಸಿದ್ದು, ಓಪನರ್​ ಯಶಸ್ವಿ ಜೈಸ್ವಾಲ್​ರನ್ನು ಹಾರ್ದಿಕ್​​ ಬದಲಿಗೆ ಕಳುಹಿಸಿಕೊಡುವಂತೆ ಎಂಐ ಬೇಡಿಕೆಯಿಟ್ಟಿದೆ.
ಕಳೆದ ವರ್ಷ ಸಂಜು ಸ್ಯಾಮ್ಸನ್ ಆರ್​ಆರ್​ನಿಂದ ನೇರವಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಹೋದ ಬಳಿಕ ಯಶಸ್ವಿ ಜೈಸ್ವಾಲ್​ಗೆ ತಂಡದ ಮುಂದಿನ ಕ್ಯಾಪ್ಟನ್ ಆಗುವ ಬಿಗ್ ಚಾನ್ಸ್ ಇತ್ತು. ಆದರೆ, ಮ್ಯಾನೇಜ್​ಮೆಂಟ್​ ಆ ಅವಕಾಶವನ್ನು ರಿಯಾನ್ ಪರಾಗ್‌ಗೆ ನೀಡುವ ಮೂಲಕ ರಾಜಸ್ಥಾನ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿತು. ಪ್ರಸ್ತುತ, ಆರ್​ಆರ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಟ್ರೇಡ್​ ಡೀಲ್ ತೆರೆಮರೆಯಲ್ಲಿ ನಡೆಯುತ್ತಿದ್ದು, ಯಾರ ಜಾಗಕ್ಕೆ ಯಾರು ಬರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net